Bellary

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಉದ್ಘಾಟನೆ

Published

on

Share this

ವಿಜಯನಗರ: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಉದಯಿಸಿದೆ. ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂತನ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು.

ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರಿ ಹೇಳುವ ವಿದ್ಯಾರಣ್ಯ ವೇದಿಕೆಯಲ್ಲಿ 464 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದರು. ಇದಕ್ಕೂ ಮುನ್ನ ವಡಕರಾಯ ದೇವಸ್ಥಾನದಿಂದ ಮುನ್ಸಿಪಲ್ ಮೈದಾನದವರೆಗೂ ಬೃಹತ್ ಮೆರವಣಿಗೆ ನಡೀತು. 40ಕಲಾ ತಂಡಗಳ ಸಾಂಸ್ಕೃತಿಕ ವೈಭವ ಕಂಡು ಬಂತು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 636 ಮಂದಿಗೆ ಕೊರೊನಾ – ನಾಲ್ವರು ಸಾವು

ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಜ್ಜಾದ ಭವ್ಯವಾದ ವೇದಿಕೆಯನ್ನು ವಿಜಯನಗರ ಕಾಲದ ಹಂಪಿಯ ಮಾತಂಗ ಪರ್ವತ, ವಿರುಪಾಕ್ಷ ದೇವಸ್ಥಾನ ರಾಜಗೋಪುರ ನಿರ್ಮಾಣ ಮಾಡಿದ ಶೈಲಿಯಲ್ಲಿ ವೇದಿಕೆ ಸಜ್ಜುಗೊಂಡಿತ್ತು. ಹೊಸಪೇಟೆ ನಗರ ಸಂಪೂರ್ಣ ದೀಪಾಲಂಕಾರದಿಂದ ಕಂಗೊಳಿಸಿತ್ತು. ಜಿಲ್ಲೆಯ ಉದ್ಘಾಟನೆ ಸಮಾರಂಭಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಳ್ಳಾರಿ ಜಿಲ್ಲೆಯ ತೋರಣಗಲ್‍ನ ಜಿಂದಾಲ್ ಏರ್ ಸ್ಟ್ರೀಪ್ ಗೆ ಬಂದಿಳಿದರು. ಸ್ವತಃ ಆನಂದ್ ಸಿಂಗ್ ಜಿಲ್ಲಾ ವಿಭಜನೆ ಮಾಡಿದ್ದ ಬಿಎಸ್‍ವೈ ಅವರನ್ನು ಬರಮಾಡಿಕೊಂಡರು.

ಬಳಿಕ ವೇದಿಕೆಯಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಶಾಲಾ ಮಕ್ಕಳು ನೆರವೇರಿಸಿದರು. ಕಾರ್ಯಕ್ರಮ ವೀಕ್ಷಣೆಗೆ ಕಿಕ್ಕಿರುದು ಜನ ಸೇರಿದ್ದರು. ಕೇವಲ ಎರಡು ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಿರುವುದಾಗಿ ಆನಂದ್ ಸಿಂಗ್ ಹೇಳಿದ್ದರು. ಆದರೆ 30 ಸಾವಿರಕ್ಕೂ ಅಧಿಕ ಜನ ಆಗಮಿಸಿದ್ದರು. ಕಾರ್ಯಕ್ರಮ ವೀಕ್ಷಿಸಲು ನೂಕು ನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಟ್ಟರು. ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿನಿ ಶಂಕಿತ ರೇಬಿಸ್ ಸೋಂಕಿಗೆ ಬಲಿ

ಜಿಲ್ಲಾ ವಿಭಜನೆ ಬಳಿಕವೂ ಮುನಿಸು ಮಾತ್ರ ಮುಗಿದಂತೆ ಕಾಣಿಸುತ್ತಿಲ್ಲ. ಜಿಲ್ಲಾ ವಿಭಜನೆಗೆ ವಿರೋಧ ಮಾಡಿದ್ದ ಸೋಮಶೇಖರ್ ರೆಡ್ಡಿ, ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ, ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್, ಸಂಡೂರು ಶಾಸಕ ತುಕಾರಮ್, ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಸಿರಗುಪ್ಪಾ, ಶಾಸಕ ಸೋಮಲಿಂಗಪ್ಪಾ ಗೈರಾಗಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications