ತುಮಕೂರು: ನಾನು ಕುರುಬ ಸಮುದಾಯಕ್ಕೆ 420 ಎಂದು ಹೇಳಿಲ್ಲ. ಪುಟ್ಟರಾಜು ಎಂಬ ಪೇದೆ 420 ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ ಅಷ್ಟೇ ಎಂದು ಮಾಜಿ ಶಾಸಕ ಸುರೇಶ್ ಗೌಡ ಅವರ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ನನ್ನ ಹೇಳಿಕೆಯಿಂದ ಕುರುಬ ಸಮುದಾಯದವರಿಗೆ ನೋವಾಗಿದರೆ ವಿಷಾದಿಸುತ್ತೇನೆ ಎಂದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷಮೆ ಕೇಳುವುದರಿಂದ ನಾನು ಚಿಕ್ಕವನಾಗಲ್ಲ, ದೊಡ್ಡವನೂ ಆಗಲ್ಲ ಎಂದರು. ಅಲ್ಲದೇ ಕುರುಬ ಸಮುದಾಯದ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ, ನಾನು ಕುರುಬ ಸಮುದಾಯಕ್ಕೆ 420 ಎಂದು ಹೇಳಿಲ್ಲ, ವ್ಯಕ್ತಿ ಕೇಂದ್ರಿಕೃತವಾಗಿ ಹೇಳಿದ್ದೇನೆ ಅಷ್ಟೇ ಎಂದರು.
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ನನ್ನ ವಿಡಿಯೋವನ್ನು ತಿರುಚಿ ನನ್ನ ಮೇಲೆ ಈ ರೀತಿ ವಿಡಿಯೋ ವೈರಲ್ ಮಾಡಲಾಗಿದೆ. ಅಲ್ಲದೇ ಒಂದು ಸಮುದಾಯವನ್ನು ನನ್ನ ವಿರುದ್ಧ ಮಾಡಲಾಗಿದೆ. ಆದರೆ ಕ್ಷಮೆ ಕೇಳುವುದು, ಸಾಮಾಜಿಕ ಜೀವನದಲ್ಲಿ ಇರುವುದಕ್ಕೆ ಯಾವುದೇ ರೀತಿ ಕುಂದಾಗುವುದಿಲ್ಲ. ಕ್ಷಮೆ ಕೇಳುವುದು ರಾಜ ಧರ್ಮ. ಆದ್ದರಿಂದಲೇ ಕ್ಷಮೆ ಕೇಳುತ್ತಿದ್ದೇನೆ ಎಂದರು.
Advertisement
ವ್ಯಕ್ತಿಯ ಹೆಸರು ಗೊತ್ತಿಲ್ಲದ ಹಿನ್ನೆಲೆಯಲ್ಲಿ ನಾನು ಸಮುದಾಯವನ್ನು ಪ್ರಸ್ತಾಪ ಮಾಡಿದ್ದೇ. 10 ವರ್ಷ ಶಾಸಕನಾಗಿ ಸೇವೆ ಮಾಡಲು ನನಗೆ ಕ್ಷೇತ್ರದ ಜನತೆ ಅವಕಾಶ ನೀಡಿದ್ದರು. ಆದರೆ ನಿನ್ನೆಯ ಘಟನೆ ಪೊಲೀಸ್ ಇಲಾಖೆಯ ದುರುಪಯೋಗದ ಬಗ್ಗೆಯಷ್ಟೇ ನಾನು ಗಮನ ಸೆಳೆಯಲು ಮಾತನಾಡಿದ್ದೆ. ಆದ್ದರಿಂದ ಈ ವಿಚಾರವನ್ನು ಉನ್ನತ ಮಟ್ಟದ ತನಿಖೆ ನಡೆಸುವವರೆಗೂ ಕೊಂಡ್ಯೊಯುತ್ತೇನೆ ಎಂದರು.
Advertisement
ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಫೈಟ್‍ನಲ್ಲಿ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದರು. ಈ ಹಂತದಲ್ಲಿ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಶಾಸಕ ಗೌರಿಶಂಕರ್ ಹಾಗೂ ಸುರೇಶ್ ಗೌಡ ಅವರು ಆರೋಪ ಪ್ರತ್ಯಾರೋಪ ಮಾಡಿಕೊಂಡು ಕೆಲ ಅಧಿಕಾರಗಳ ವಿರುದ್ಧ ದೂರು ನೀಡಿದ್ದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]