-ಸೂರಿಲ್ಲದೆ ಬೀದಿಗೆ ಬಂದ್ವು ಐದು ಕುಟುಂಬಗಳು
ತುಮಕೂರು: ನೆಲೆ ಕಂಡುಕೊಂಡಿದ್ದ ಅಲೆಮಾರಿ ಜನಾಂಗದ ಗುಡಿಸಿಲಿಗೆ ಕೆಲ ದುಷ್ಕರ್ಮಿಗಳು ಬೆಂಕಿಯಿಟ್ಟ ಅಮಾನವೀಯತೆ ಮೆರೆದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಐ.ಕೆ.ಕಾಲೊನಿ ಬಳಿ ನಡೆದಿದೆ.
ಅರಸಮ್ಮ, ಶಶಿಕಲಾ, ಗಂಗಮ್ಮ, ಆಂಜಿನಮ್ಮ ಹಾಗೂ ಮಂಜಮ್ಮ ಎಂಬವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿವೆ. ಈ ಕುಟುಂಬಗಳು ಪಿಡಬ್ಲ್ಯೂಡಿಗೆ ಸೇರಿದ ಜಾಗದಲ್ಲಿ ಕಳೆದ 20 ವರ್ಷದಿಂದ ವಾಸವಾಗಿವೆ. ಈಗ ಸೂರಿಲ್ಲದೆ ಐದೂ ಕುಟುಂಬಗಳು ಬೀದಿಗೆ ಬಿದ್ದಿದ್ದು, ಮಕ್ಕಳ ಶಾಲಾ ಪುಸ್ತಕಗಳು, ಬಟ್ಟೆ, ಧವಸ ದಾನ್ಯ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ.
Advertisement
Advertisement
ನಾವು ಕೂಲಿ ಕೆಲಸಕ್ಕೆ ಹೋದಾಗ ಶುಕ್ರವಾರ ಮಧ್ಯಾಹ್ನ, ಸಂಜೆ ಹಾಗೂ ಇಂದು ಬೆಳಗ್ಗೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಇಲ್ಲಿಂದ ನಮ್ಮನ್ನು ತೆರವುಗೊಳಿಸಲು ಹೀಗೆ ಮಾಡುತ್ತಿದ್ದಾರೆ. ಗ್ರಾಮಸ್ಥರೂ ನಮಗೆ ಇರಲು ಅವಕಾಶ ನೀಡುತ್ತಿಲ್ಲ. ಮುಂದೆ ನಾವು ಎಲ್ಲಿ ನೆಲೆ ಕಂಡುಕೊಳ್ಳವುದು ಅಂತಾ ಗೊತ್ತಾಗುತ್ತಿಲ್ಲ ಎಂದು ಸಂತ್ರಸ್ತ ರಾಮಕೃಷ್ಣ ಅಳಲು ತೋಡಿಕೊಂಡಿದ್ದಾರೆ.
Advertisement
ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಅಷ್ಟೇ ಅಲ್ಲದೆ ನಾನು ತುಂಬು ಗರ್ಭಿಣಿ, ಸೂರಿಲ್ಲದೆ ಬೀದಿಗೆ ಬಂದಿದ್ದೇವೆ. ಎಲ್ಲಿಗೆ ಹೋಗಬೇಕು?, ಏನು ಮಾಡಬೇಕು? ಅಂತಾ ಅರ್ಥವಾಗುತ್ತಿಲ್ಲ. ನಮ್ಮ ಆಧಾರ್ ಕಾರ್ಡ್, ಪಡಿತರ ಚೀತಿ, ಹಾಸಿಗೆ, ಧವಸ ಧಾನ್ಯಗಳು ಸುಟ್ಟು ಹೋಗಿವೆ ಎಂದು ಮಹಿಳೆ ಅಸಹಾಯಕತೆ ತೋಡಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv