ಮಡಿಕೇರಿ: ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿರುವ ಸಿನಿಮಾ ಅಂದರೆ ಅದು ಕಾಂತಾರ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಕನ್ನಡ ಒಂದೇ ಅಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದಿದೆ. ಈ ಸಿನಿಮಾ ಮೂಡಿಸಿದ ಜಾಗೃತೆಯಿಂದಾಗಿಯೇ ಕರಾವಳಿ ಭಾಗದ ದೈವ ನರ್ತಕರನ್ನು ಪೂಜ್ಯ ಭಾವನೆಯಿಂದ ಕಾಣುವಂತೆ ಅಗಿದೆ. ಅದ್ರೆ ಇತ್ತೀಚಿನ ದಿನಗಳಲ್ಲಿ ತುಳು ನಾಡಿದ ದೈವ ನರ್ತಕರ ಹಾಗೆ ಕೆಲವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನರ್ತನ ಮಾಡುತ್ತಿರುವುದರಿಂದ ಇದೀಗ ತುಳು ನಾಡಿದ ದೈವ ನರ್ತಕರು ಅಂತವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ನೂರಾರು ವರ್ಷಗಳ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ತುಳು ನಾಡಿನ ದೈವಗಳನ್ನು ತುಳು ನಾಡಿನ ಜನರು ಅತ್ಯಂತ ಭಕ್ತಿ ಭಾವದಿಂದ ಪೂಜೆ ಮಾಡುತ್ತಿದ್ರು. ಅಲ್ಲದೇ ಈ ದೈವಗಳದ ಬಗ್ಗೆ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕಾಂತರ ಅನ್ನೋ ಸಿನಿಮಾ ಮಾಡಿ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ರು. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರದಿಂದ ದೈವ ನರ್ತಕರಿಗೆ ಮಾಸಾಶನ ಕೋಡುವಂತೆ ನಿರ್ಧಾರವು ಮಾಡಿತ್ತು. ಹೀಗಾಗಿ ದೈವ ನರ್ತಕರು ಖುಷಿಯಿಂದಲ್ಲೇ ಇದ್ರು. ಅದ್ರೆ ಇತ್ತೀಚಿನ ದಿನಗಳಲ್ಲಿ ಕಾರಂತ ಸಿನಿಮಾದ ಹಾಡುಗಳನ್ನು ಬಳಸಿಕೊಂಡು ಮಕ್ಕಳು ಯುವಕ ಯುವತಿಯರು ಸಾಂಸ್ಕೃತಿಕ ವೇದಿಕೆಗಳಲ್ಲಿ ದೈವ ನರ್ತನೆ ಮಾಡುತ್ತಿರುವುದು ದೈವ ನರ್ತನ ಮಾಡುವು ಅರಾಧಾಕರಿಗೆ ಸಾಕಷ್ಟು ನೋವು ಉಂಟು ಮಾಡುತ್ತಿದೆ ಎನ್ನಲಾಗಿದೆ.
ಅಷ್ಟೇ ಅಲ್ಲದೇ ಇದೀಗಾ ದಸರಾ ಹಬ್ಬದ ಸಂಭ್ರಮ ಹೀಗಾಗಿ ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ವೇದಿಕೆಯಲ್ಲಿ ದೈವ ನರ್ತನೆಯನ್ನು ಮಹಿಳೆಯರು ಮಾಡಿದ್ದಾರೆ. ಹೀಗಾಗಿ ತಮ್ಮ ದೇವರಿಗೆ ನಮ್ಮ ನಂಬಿಕೆಗೆ ಅವಮಾನ ಮಾಡಲಾಗುತ್ತಿದೆ ಎಂದು ಕೊಡಗು ಜಿಲ್ಲೆಯ ದೈವ ನರ್ತಕರ ಸಂಘದಿಂದ ಕಾನೂನು ಸಮರಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Punjab | ಕಾರು ಅಡ್ಡಗಟ್ಟಿ ಆಪ್ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಾರಂತರ ಸಿನಿಮಾ ಹಾಡು ಹಾಕಿಕೊಂಡು ದೈವ ನರ್ತನೆ ಮಾಡಬರದು ಎಂದು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಶಾಲೆ ಕಾಲೇಜುಗಳಲ್ಲಿ ದೈವ ನರ್ತನೆ ಮಾಡುವುದು ನಿಲ್ಲಿಸಲಾಗಿತ್ತು. ಆದರೀಗ ಮಡಿಕೇರಿ ಹಾಗೂ ಗೋಣಿಕೋಪ್ಪದಲ್ಲಿ ದಸರಾ ಕಾರ್ಯಕ್ರಮ ಅಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಮಹಿಳೆಯರೇ ದೈವ ವೇಷಗಳನ್ನು ಹಾಕಿಕೊಂಡು ದೈವ ನರ್ತನೆ ಮಾಡುತ್ತಿದ್ದಾರೆ. ದೈವ ನರ್ತನೆ ಮಾಡಬೇಕಾದರೆ ಗಂಡಸರು ಮಾಡಬೇಕು ಅದರದ್ದೇ ಆದ ರೀತಿ ನೀತಿಗಳ ನಿಯಮಗಳು ಇದೆ. ಆದ್ರೆ ಕೆಲವರು ಜನರಿಗೆ ಮನರಂಜನೆ ಕೋಡುವ ದೃಷ್ಟಿಯಿಂದ ಈ ರೀತಿಯಲ್ಲಿ ತುಳು ನಾಡಿನ ದೈವಗಳಿಗೆ ಅವಮಾನ ಮಾಡುತ್ತಿದ್ದಾರೆ. ಇದರ ಬಗ್ಗೆ ದೈವಗಳೇ ಅವರಿಗೆ ಶಿಕ್ಷೆ ನೀಡುತ್ತದೆ. ಹಾಗೂ ತುಳು ನಾಡಿದ ಎಲ್ಲಾ ದೈವ ಅರಾಧಾಕರನ್ನು ಕರೆದುಕೊಂಡು ಬೃಹತ್ ಹೋರಾಟ ನಡೆಸಲಾಗುತ್ತದೆ ಎಂದು ದೈವ ನರ್ತಕರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಾಟಕಗಳಲ್ಲಿ ವೇದಿಕೆಯ ವಿವಿಧ ಕಾರ್ಯಕ್ರಮಗಳಲ್ಲಿ ದೈವ ನರ್ತಕರನ್ನೂ ಅವಮಾನ ಮಾಡುವಂತಹ ಕೆಲಸ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾನೂನು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಕಾಲದಲ್ಲಿ ಪಿಪಿಇ ಕಿಟ್ ಖರೀದಿ ಅಕ್ರಮ – ಕಿದ್ವಾಯಿ ಆಸ್ಪತ್ರೆಯ ಆರ್ಥಿಕ ಸಲಹೆಗಾರ ಅಮಾನತು