ಬಳ್ಳಾರಿ: ಗಣಿನಾಡು ಬಳ್ಳಾರಿ ಇದೀಗ ಕೊರೊನಾ ಮಾಹಾಮಾರಿಯ ಬಲೆಯಲ್ಲಿ ಸಿಕ್ಕಿ ನರಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಇರೋ ರೂಲ್ಸ್‍ಗಿಂತ ಟಫ್ ಆಗಿ ಬಳ್ಳಾರಿಯಲ್ಲಿ ರೂಲ್ಸ್ ಜಾರಿ ಮಾಡಲಾಗಿದೆ. ಇಂದಿನಿಂದ ಜಿಲ್ಲೆಯಲ್ಲಿ ಪ್ರತ್ಯೇಕ ರೂಲ್ಸ್ ಜಾರಿಯಾಗ್ತಿದೆ.
ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಯಲ್ಲಿ ಕೊರೊನಾ ಕೇಕೆ ಹಾಕ್ತಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 568 ಪಾಸಿಟಿವ್ ಕೇಸ್ ಬಂದಿವೆ. ಸದ್ಯ ಜಿಲ್ಲೆಯ ಪಾಸಿಟಿವಿಟಿ ರೇಟ್ 15ರಷ್ಟಿದೆ. ಹೀಗಿರುವಾಗ ಜಿಲ್ಲಾಡಳಿತ ಜಿಲ್ಲೆಗೆ ಇಂದಿನಿಂದ ಪ್ರತ್ಯೇಕ ನಿಯಮ ಜಾರಿ ಮಾಡಿದೆ. ರಾಜ್ಯ ಸರ್ಕಾರದ ಗೈಡ್‍ಲೈನ್ಸ್ ಜೊತೆಗೆ ಬಳ್ಳಾರಿ ಜಿಲ್ಲಾಡಳಿತ ಮತ್ತಷ್ಟು ಬಿಗಿ ನಿಯಮ ಜಾರಿ ಮಾಡಿದೆ. ಇಂದಿನಿಂದ ಜ.23ರವರೆಗೆ ಶಾಲಾ-ಕಾಲೇಜು, ವಿವಿ ಬಂದ್ ಆಗಲಿದೆ. ಜ.31ರವರೆಗೆ ದೇವಸ್ಥಾನ, ಚರ್ಚ್, ಮಸೀದಿ ಬಂದ್, ಜ.31ರವರೆಗೆ ಈಜುಕೊಳ, ಥಿಯೇಟರ್ ಕ್ಲೋಸ್, ಮದುವೆಗೆ ಕೇವಲ 50 ಜನರಿಗೆ ಅವಕಾಶ ನೀಡಲಾಗುತ್ತಿದೆ. ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ.
ಪ್ರಮುಖವಾಗಿ ಪ್ರಾರ್ಥನಾ ಮಂದಿರಗಳಿಗೆ ಬೀಗ ಹಾಕಿರೋ ಜಿಲ್ಲಾಡಳಿತ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇಷ್ಟು ಮಾತ್ರವಲ್ಲದೇ ನೈಟ್‍ಕಫ್ರ್ಯೂನಲ್ಲೂ ಬದಲಾವಣೆ ಮಾಡಿದೆ. ಇನ್ನು ರಾಜ್ಯದಲ್ಲಿ ನೈಟ್ ಕರ್ಫ್ಯೂ ಸಮಯ ಬದಲಾವಣೆ ಮಾತು ಕೇಳಿಬರ್ತಿರೋವಾಗಲೇ ಬಳ್ಳಾರಿಯಲ್ಲಿ ಮೊದಲು ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇಂದಿನಿಂದ ನೈಟ್ ಕರ್ಫ್ಯೂ ಸಮಯದಲ್ಲಿ ಬದಲಾವಣೆ ಆಗಲಿದೆ. ರಾತ್ರಿ 8 ಗಂಟೆಯಿಂದಲೇ ನೈಟ್ ಕರ್ಫ್ಯೂ ಆರಂಭವಾಗಲಿದ್ದು, ಬೆಳಗ್ಗೆ 6 ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದೆ. ಇದನ್ನೂ ಓದಿ: ಸಾಕುನಾಯಿಯ ಹುಟ್ಟುಹಬ್ಬಕ್ಕೆ 13 ಸಾವಿರ ರೂ. ಹಾಸಿಗೆ ಗಿಫ್ಟ್ ಕೊಟ್ಟ ಮಾಲೀಕ!
ಇನ್ನು ಥಿಯೇಟರ್ ಬಂದ್ ಮಾಡೋದು ಚಿತ್ರಮಂದಿರ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ 50-50 ರೂಲ್ಸ್ ಇದೆ. ಆದ್ರೆ ಬಳ್ಳಾರಿ ಜಿಲ್ಲೆಯಲ್ಲಿ ಇಂದಿನಿಂದ ಚಿತ್ರಮಂದಿರ ಕ್ಲೋಸ್ ಮಾಡಲು ಜಿಲ್ಲಾಡಳಿತ ಆದೇಶ ನೀಡಿದೆ. ಹೀಗಿರುವಾಗ ಚಿತ್ರಮಂದಿರ ನಂಬಿ ಜಿಲ್ಲೆಯಲ್ಲಿ ಸುಮಾರು 1000 ರಿಂದ 1500 ಜನ ಇದಾರೆ. ಈ ಆದೇಶನ ಪರಿಶೀಲನೆ ಮಾಡಬೇಕು ಅಂತಾ ಚಿತ್ರಮಂದಿರ ಮಾಲೀಕರ ಆಗ್ರಹಿಸಿದ್ದಾರೆ. ಒಟ್ಟಾರೆ ಬಳ್ಳಾರಿ ಜಿಲ್ಲೆಯಲ್ಲಿ ಇಂದಿನಿಂದ ಕಠಿಣ ರೂಲ್ಸ್ ಜಾರಿಯಲ್ಲಿರಲಿದೆ. ಜಿಲ್ಲಾಡಳಿತ ಜಾರಿ ಮಾಡಿದ ಆದೇಶ ಎಷ್ಟರ ಮಟ್ಟಿಗೆ ಪಾಲನೆ ಆಗತ್ತೆ ಅನ್ನೋದನ್ನ ಕಾದು ನೋಡಬೇಕು.