ಕಾಬೂಲ್/ಇಸ್ಲಾಮಾಬಾದ್: ದಕ್ಷಿಣ ವಜಿರಿಸ್ತಾನದಲ್ಲಿರುವ ಪಾಕಿಸ್ತಾನಿ ಮಿಲಿಟರಿ ಹೊರಠಾಣೆ ಮೇಲೆ ನಡೆದ ಭೀಕರ ದಾಳಿಯಲ್ಲಿ 25 ಪಾಕ್ ಸೈನಿಕರು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎಂದು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಹೇಳಿಕೊಂಡಿದೆ.
BREAKING NEWS 🚨
The Tehrik-i-Taliban Pakistan (TTP) has claimed that its fighters killed 25 Pakistani soldiers and wounded eight others in an attack carried out in South Waziristan.
In an official statement, the militant group said that last night it launched an assault on a… pic.twitter.com/55hGUx1Axl
— Voice of Khorasan (@VoiceKhorasan1) October 21, 2025
ಸೋಮವಾರ ತಡರಾತ್ರಿ ತನ್ನ ಸೇನೆಯು ಮಿಲಿಟರಿ ಹೊರಠಾಣೆ ಮೇಲೆ ಭೀಕರ ದಾಳಿ ನಡೆಸಿದೆ. ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಡ್ರೋನ್‌ಗಳನ್ನು (Pakistani Army Drone) ನಾಶಪಡಿಸಿದ್ದಾಗಿ ಟಿಟಿಪಿ ಉಗ್ರರ ಗುಂಪು ಹೇಳಿಕೊಂಡಿದೆ. ದಾಳಿಯ ನಂತರ ಮಿಲಿಟರಿ ಠಾಣೆಯನ್ನ ಟಿಟಿಪಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಬುಡಕಟ್ಟು ಪ್ರದೇಶಗಳಲ್ಲಿ ಟಿಟಿಪಿ ಆಗಾಗ್ಗೆ ಪಾಕಿಸ್ತಾನಿ ಭದ್ರತಾಪಡೆಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಾ ಬರುತ್ತಿದೆ. ಪಹಲ್ಗಾಮ್ ದಾಳಿ ಬಳಿಕ ಒಂದೆಡೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾಗಲೂ ಟಿಟಿಪಿ ಪಾಕ್‌ನ ಸೇನಾ ಠಾಣೆಯ ಮೇಲೆ ದಾಳಿ ನಡೆಸಿ ಹತ್ತಾರು ಮಂದಿ ಸೈನಿಕರನ್ನ ಕೊಂದಿತ್ತು. ಆದ್ರೆ ಇದು ಇತ್ತೀಚಿನ ತಿಂಗಳಲ್ಲಿ ನಡೆಸಿದ ಭೀಕರ ದಾಳಿಯಲ್ಲಿ ಒಂದಾಗಿದೆ ಎಂದು ಹೇಳಲಾಗ್ತಿದೆ. ಪಾಕಿಸ್ತಾನ ಸೇನೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.