ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ದೇವಾಲಯವು ಕೆಲವು ವಾರಗಳ ಕಾಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ
ವೆಂಕಟೇಶ್ವರನ ಬೆಟ್ಟದ ದೇವಾಲಯದೊಳಗೆ ನಡೆಸಲಾಗುವ ಕೆಲವು ವಾರದ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಮಂಗಳವಾರ ನಡೆಯುವ ಅಸ್ತದಳ ಪಾದಪದ್ಮರದಾನ, ಗುರುವಾರದ ತಿರುಪ್ಪವಾಡ, ಶುಕ್ರವಾರದ ನಿಜಪಾದ ದರ್ಶನಂ ಮುಂತಾದ ಸಾಪ್ತಾಹಿಕ ಸೇವೆಗಳನ್ನು ಜೂನ್ 30ರವರೆಗೆ ಸ್ಥಗಿತಗೊಳಿಸಲಾಗಿದೆ.
ಪ್ರಸ್ತುತ ಬೇಸಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ದೇವಾಲಯಕ್ಕೆ ಜನರು ಭೇಟಿ ನೀಡುವ ಹಿನ್ನೆಲೆ ಸಾಮಾನ್ಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಸಮಯ ದರ್ಶನವನ್ನು ಒದಗಿಸುವ ಉದ್ದೇಶದಿಂದ ಕೆಲವು ಸೇವೆಗಳನ್ನು ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಸಮಾಧಿ ಅಗೆದು ಅಪ್ರಾಪ್ತೆಯ ಶವದ ಅತ್ಯಾಚಾರ- ಶಾಕ್ ಆದ ಕುಟುಂಬಸ್ಥರಿಂದ ದೂರು
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಅವರು, ಸಾಪ್ತಾಹಿಕ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಮಂಗಳವಾರ ಮತ್ತು ಶುಕ್ರವಾರದಂದು ಹೆಚ್ಚುವರಿಯಾಗಿ ಸುಮಾರು 5,000 ಯಾತ್ರಾರ್ಥಿಗಳಿಗೆ ಮತ್ತು ಗುರುವಾರದಂದು 9,000 ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಟಿಟಿಡಿಗೆ ಅನುವು ಮಾಡಿಕೊಡುತ್ತದೆ. ಈ ನಿರ್ಧಾರದಿಂದ ಭಕ್ತರು ವೆಂಕಟೇಶ್ವರ ದೇವಾಲಯದ ಒಳಗೆ ಹೆಚ್ಚು ಗಂಟೆಗಳ ಕಾಲ ಕಾಯಬೇಕಾಗಿಲ್ಲ ಎಂದಿದ್ದಾರೆ.
ಕೋವಿಡ್-19ನಿಂದಾಗಿ ಕಳೆದ ಎರಡು ವರ್ಷಗಳಿಂದ ಟಿಟಿಡಿ ತನ್ನ ಹಲವು ಚಟುವಟಿಕೆಗಳನ್ನು ಮೊಟಕುಗೊಳಿಸಿತ್ತು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಕ್ರಮೇಣ ಟಿಟಿಡಿ ಸಾರ್ವಜನಿಕ ಕಲ್ಯಾಣ ಮತ್ತು ಹಿಂದೂ ಧಾರ್ಮಿಕ ಪ್ರಚಾರ ಚಟುವಟಿಕೆಗಳನ್ನು ಪುನರಾರಂಭಿಸುತ್ತಿದೆ. ಇದನ್ನೂ ಓದಿ: ನಮ್ಮ ಮನೆ ಎಕ್ಸ್ ಪೋ 4ನೇ ಆವೃತ್ತಿಗೆ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್