ಅಮರಾವತಿ: ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸಿ, ಭಕ್ತಿಪೂರ್ವಕವಾಗಿ ನೀಡುವ ಕಾಣಿಕೆಗಳಿಂದ ಕಲಿಯುಗದ ವೈಕುಂಠದ ಖಜಾನೆ ತುಂಬಿ ಹೋಗಿದೆ. ಇದೀಗ ತಿರುಮಲ ತಿರುಪತಿ ದೇವಸ್ಥಾನಂ (TTD) ಶ್ವೇತಪತ್ರ ಬಿಡುಗಡೆ ಮಾಡಿದ್ದು, ತಿಮ್ಮಪ್ಪನ ಆಸ್ತಿ (Property) ಎಷ್ಟಿದೆ ಎಂಬುದನ್ನು ತಿಳಿಸಿದೆ.
ತಿರುಪತಿ ದೇವಾಲಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ (Bank) ಸುಮಾರು 5,300 ಕೋಟಿ ರೂ.ಗೂ ಹೆಚ್ಚು ಮೌಲ್ಯದ 10.3 ಟನ್ ತೂಗುವ ಚಿನ್ನ (Gold) ಹಾಗೂ 15,938 ಕೋಟಿ ರೂ. ನಗದು (Money) ಠೇವಣಿ ಇದೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.
Advertisement
Advertisement
ಟಿಟಿಡಿ ಆಸ್ತಿಯ ಒಟ್ಟು ಮೌಲ್ಯ 2.26 ಲಕ್ಷ ಕೋಟಿ ರೂ. ಇದೆ ಎಂದು ವರದಿಯಾಗಿದೆ. ದೇವಾಲಯದ ಟ್ರಸ್ಟ್‌ನ ನಿವ್ವಳ ಮೌಲ್ಯ 2.26 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಧರ್ಮ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ದೇವಾಲಯಕ್ಕೆ ಸಂಬಂಧಿಸಿದಂತೆ 2019ರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿಗಳ ರೂಪದಲ್ಲಿ 13,025 ಕೋಟಿ ರೂ. ಹೂಡಿಕೆಯಾಗಿದ್ದು, ಅದು ಈಗ 15,938 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ, ಹೂಡಿಕೆ 2,900 ಕೋಟಿ ರೂ. ಯಷ್ಟು ಹೆಚ್ಚಾಗಿದೆ ಎಂದು ರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ 4.5 ತೀವ್ರತೆಯ ಭೂಕಂಪ – ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಕಂಪನದ ಅನುಭವ
Advertisement
ಇತ್ತೀಚೆಗೆ ಟಿಟಿಡಿ ಅಧ್ಯಕ್ಷರು ಮತ್ತು ಮಂಡಳಿ ಹೆಚ್ಚುವರಿ ಹಣವನ್ನು ಆಂಧ್ರಪ್ರದೇಶ ಸರ್ಕಾರದ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಯನ್ನು ಟ್ರಸ್ಟ್ ನಿರಾಕರಿಸಿದೆ. ಹೆಚ್ಚುವರಿ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಟ್ರಸ್ಟ್ ಹೇಳಿದೆ.
ದೇವಾಲಕ್ಕೆ ಭಾರೀ ಮಟ್ಟದ ಆದಾಯ ಭಕ್ತರು, ವ್ಯಾಪಾರಿಗಳು ಹಾಗೂ ಸಂಸ್ಥೆಗಳ ದೇಣಿಗೆಯಿಂದ ಬರುತ್ತದೆ. ಇದನ್ನೂ ಓದಿ: ಅಕ್ರಮ ಮೀನುಗಾರಿಕೆ – 15 ಭಾರತೀಯ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ