LatestLeading NewsMain PostNational

ಉತ್ತರಾಖಂಡದಲ್ಲಿ 4.5 ತೀವ್ರತೆಯ ಭೂಕಂಪ – ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಕಂಪನದ ಅನುಭವ

ನವದೆಹಲಿ: ಉತ್ತರಾಖಂಡದ (Uttarakhand) ತೆಹ್ರಿಯಲ್ಲಿ ಭಾನುವಾರ ಬೆಳಗ್ಗೆ 8:33 ರ ಸುಮಾರಿಗೆ 4.5 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ಉತ್ತರಾಖಂಡದಲ್ಲಿ ಉಂಟಾಗಿರುವ ಭೂಕಂಪದ ಬೆನ್ನಲ್ಲೇ ದೆಹಲಿ-ಎನ್‌ಸಿಆರ್‌ನಲ್ಲೂ (Delhi-NCR) ಲಘು ಭೂಕಂಪದ ಅನುಭವವಾಗಿರುವುದಾಗಿ ವರದಿಯಾಗಿದೆ. ಸದ್ಯ ಎಲ್ಲಿಯೂ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಅಕ್ರಮ ಮೀನುಗಾರಿಕೆ – 15 ಭಾರತೀಯ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ

ಎನ್‌ಸಿಎಸ್ ಪ್ರಕಾರ, ಭೂಕಂಪದ ಕೇಂದ್ರ ಬಿಂದುವನ್ನು ಉತ್ತರಕಾಶಿಯ ಪೂರ್ವ-ಆಗ್ನೇಯಕ್ಕೆ 17 ಕಿ.ಮೀ. ದೂರದಲ್ಲಿ 5 ಕಿ.ಮೀ. ಆಳದಲ್ಲಿ ಗುರುತಿಸಲಾಗಿದೆ. ಈ ಬಗ್ಗೆ ಎನ್‌ಸಿಎಸ್ ಟ್ವೀಟ್ ಮಾಡಿದೆ. ಇದನ್ನೂ ಓದಿ: ನನ್ನನ್ನು ದೀದಿ ಮಾ ಅಂತ ಕರೆಯಿರಿ – ಕುಟುಂಬ ತ್ಯಜಿಸಿದ ಬಿಜೆಪಿ ನಾಯಕಿ ಉಮಾ ಭಾರತಿ

ಈ ವರ್ಷ ಆಗಸ್ಟ್, ಮೇ ಮತ್ತು ಫೆಬ್ರವರಿಯಲ್ಲಿ ಉತ್ತರಾಖಂಡದಲ್ಲಿ ಭೂಕಂಪಗಳು ವರದಿಯಾಗಿವೆ. ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ ಮತ್ತು ಉತ್ತರಾಖಂಡದ ಹಲವಾರು ಪ್ರದೇಶಗಳಲ್ಲಿ ಕಳೆದ 6 ವರ್ಷಗಳಿಂದ 4 ರಿಂದ 5.1 ರವರೆಗಿನ ತೀವ್ರತೆಯ ಭೂಕಂಪಗಳು ಪದೇ ಪದೇ ನಡೆಯುತ್ತಿವೆ. ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪ 5.8 ತೀವ್ರತೆಯನ್ನು ಹೊಂದಿತ್ತು.

Live Tv

Leave a Reply

Your email address will not be published. Required fields are marked *

Back to top button