ಶಿವಮೊಗ್ಗ: ಸಿಗಂದೂರು (Sigandur) ಬಳಿಯ ಕೂರನಕೊಪ್ಪದ ಬಳಿ ಪ್ರವಾಸಿಗರಿದ್ದ ಟಿಟಿ ವಾಹನ ಪಲ್ಟಿಯಾಗಿ (Accident) 12 ಮಹಿಳೆಯರು ಹಾಗೂ ಚಾಲಕ ಗಾಯಗೊಂಡಿದ್ದಾರೆ. ಇವರೆಲ್ಲ ಬೆಂಗಳೂರಿನಿಂದ (Bengaluru) ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಆಗಮಿಸಿದ್ದರು.
ಬೆಂಗಳೂರಿನಿಂದ ರೈಲಿನ ಮೂಲಕ ಸಾಗರಕ್ಕೆ 12 ಮಹಿಳೆಯರ ತಂಡ ಬಂದಿತ್ತು. ಅಲ್ಲಿಂದ ಟಿಟಿ ವಾಹನ ಮಾಡಿಕೊಂಡು ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಹೋಗುತ್ತಿದ್ದರು. ಈ ವೇಳೆ ಕೂರನಕೊಪ್ಪ ಸಮೀಪದಲ್ಲಿ ಟಿಟಿ ವಾಹನಪಲ್ಟಿಯಾಗಿದೆ.
12 ಮಹಿಳೆಯರಲ್ಲಿ ಮೂರು ಮಹಿಳೆಯರಿಗೆ ಗಂಭೀರ ಗಾಯವಾಗಿದೆ. ಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.

