– ಟಿಟಿ ಚಾಲಕ ಪೊಲೀಸರ ವಶಕ್ಕೆ
ಹಾಸನ: ಟಿಟಿ (TT) ವಾಹನ ಹಾಗೂ ಬೈಕ್ (Bike) ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಂಭೀರ ಗಾಯಗೊಂಡ ಘಟನೆ ಹಾಸನ (Hassan) ಜಿಲ್ಲೆಯಲ್ಲಿ ನಡೆದಿದೆ.
ಬೇಲೂರು (Belur) ತಾಲೂಕಿನ ಹಳೇಬೀಡು (Halebeedu) ಹೋಬಳಿಯ ಕಲ್ಲಹಳ್ಳಿ ಅರಣ್ಯದ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ಶರತ್ (20) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ವೀರೇಶ್ (20) ಸ್ಥಿತಿ ಚಿಂತಾಜನಕವಾಗಿದೆ. ಸುರಪುರ ಗ್ರಾಮದವರಾದ ಶರತ್ ಮತ್ತು ವೀರೇಶ್ ಸ್ಪ್ಲೆಂಡರ್ ಬೈಕ್‌ನಲ್ಲಿ ಬೇಲೂರಿನಿಂದ ಹಳೇಬೀಡು ಕಡೆಗೆ ಬರುತ್ತಿದ್ದರು. ಈ ಸಂದರ್ಭ ಹಳೇಬೀಡಿನಿಂದ ಬೇಲೂರು ಕಡೆಗೆ ಬರುತ್ತಿದ್ದ ಟಿಟಿ ವಾಹನ ಕಲ್ಲಹಳ್ಳಿ ಗ್ರಾಮದ ಬಳಿ ಬೈಕ್‌ಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಇದನ್ನೂ ಓದಿ: 3 ಸಾವಿರಕ್ಕಾಗಿ ಯುವಕನನ್ನು ಹಾಡಹಗಲೇ ಚುಚ್ಚಿ ಚುಚ್ಚಿ ಕೊಂದ!
ಘಟನೆ ಪರಿಣಾಮ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ವೀರೇಶ್‌ನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿಟಿ ವಾಹನ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಎಣ್ಣೆ ಸಾಲ ಕೊಡಲ್ಲ ಎಂದಿದ್ದಕ್ಕೆ ಕ್ಯಾಶಿಯರ್ ಮೇಲೆ ಬಾಟ್ಲಿಯಿಂದ ಹಲ್ಲೆ!
Web Stories