ಕಿರುತೆರೆ ನಟ ಸುನಾಮಿ ಕಿಟ್ಟಿ ಬಂಧನ, ಬಿಡುಗಡೆ

Public TV
1 Min Read
tsunami kitty

ಬೆಂಗಳೂರು: ಪಬ್‍ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಸುನಾಮಿ ಕಿಟ್ಟಿಯನ್ನು ಪೊಲೀಸರು ಬಂಧಿಸಿದ್ದು, ತದನಂತರ ಬಿಡುಗಡೆ ಮಾಡಿದ್ದಾರೆ.

ಸಿಗರೇಟ್ ವಿಚಾರವಾಗಿ ಪಂಬ್ ಸಿಬ್ಬಂದಿಯ ಮೇಲೆ ಸುನಾಮಿ ಕಿಟ್ಟಿ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯನಗರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ಈಗ ಕಿಟ್ಟಿಯನ್ನು ಬಂಧಿಸಿದ್ದರು.

sunami kitty

ನಡೆದಿದ್ದೇನು?
ಸುನಾಮಿ ಕಿಟ್ಟಿ ತನ್ನ ಸ್ನೇಹಿತರ ಜೊತೆ ಭಾನುವಾರ ರಾತ್ರಿ ಮದ್ಯಪಾನ ಮಾಡಲು ಪಬ್‍ಗೆ ಹೋಗಿದ್ದರು. ಈ ವೇಳೆ ಸುನಾಮಿ ಕಿಟ್ಟಿ ಸಿಂಗಲ್ ಸಿಗರೇಟ್ ಕೇಳಿದ್ದಾರೆ. ಆಗ ಸಿಂಗಲ್ ಸಿಗರೇಟ್ ಸಿಗಲ್ಲ, ಪ್ಯಾಕ್ ತೆಗೆದುಕೊಳ್ಳುವಂತೆ ಸಿಬ್ಬಂದಿ ಹೇಳಿದ್ದಾರೆ. ಈ ವಿಚಾರವಾಗಿ ಸುನಾಮಿ ಕಿಟ್ಟಿ ಹಾಗೂ ಪಬ್ ಸಿಬ್ಬಂದಿ ನಡುವೆ ಗಲಾಟೆ ನಡೆದಿತ್ತು.

police station subramanyapura

ಅಲ್ಲದೇ ಇದರಿಂದ ಕೋಪಗೊಂಡ ಸುನಾಮಿ ಕಿಟ್ಟಿ, ಹೈಲಾಂಚ್ ಪಬ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪಬ್ ಸಿಬ್ಬಂದಿ ಯಾವುದೇ ದೂರು ನೀಡಿರಲಿಲ್ಲ. ಸದ್ಯ ಪಬ್ ಸಿಬ್ಬಂದಿ, ಸುನಾಮಿ ಕಿಟ್ಟಿ ಜೊತೆ ರಾಜಿ ಸಂಧಾನ ಮಾಡಿಕೊಂಡು ಸುಮ್ಮನಾಗಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ ಸುಬ್ರಹ್ಮಣ್ಯನಗರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಸುನಾಮಿ ಕಿಟ್ಟಿಯನ್ನು ಇಂದು ಬಂಧಿಸಿದ್ದು, ಬಳಿಕ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆ ಸುನಾಮಿ ಕಿಟ್ಟಿ ಕಿಡ್ನಾಪ್ ಕೇಸ್ ನಲ್ಲಿ ಜ್ಞಾನ ಭಾರತಿ ಠಾಣೆಯಲ್ಲಿ ಅರೆಸ್ಟ್ ಆಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article