ಇಂಡೋನೇಷ್ಯಾ: ದ್ವೀಪವಾದ ಸುಲವೇಸಿಯಲ್ಲಿ ಅಪ್ಪಳಿಸಿದ ಸುನಾಮಿ ಹಾಗೂ ಭೂಕಂಪದಿಂದ ಮೃತಪಟ್ಟಿರುವ ಸಂಖ್ಯೆ 400 ಕ್ಕೆ ಏರಿಕೆಯಾಗಿದೆ.
ಇಂಡೋನೇಷ್ಯಾ ವಿಪತ್ತು ನಿಯಂತ್ರಣಾ ಸಂಸ್ಥೆಯ ವಕ್ತಾರ ಸುಟೋಪೊ ಪುರ್ವೋ ನುಗ್ರೂಹೂ, 384 ಜನರನ್ನು ಪಾಲು ನಗರದಲ್ಲೇ ಸತ್ತರು. ಶುಕ್ರವಾರ ಸಂಜೆ ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ 7.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಇದರಿಂದಾಗಿ 540 ಜನ ಗಾಯಗೊಂಡಿದ್ದು, 29 ಕಾಣೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವೂ ಇದೆ ಎಂದು ಹೇಳಿದರು. ಇದನ್ನು ಓದಿ: ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ- ಸುನಾಮಿ ಎಚ್ಚರಿಕೆ: ತೆರೆಗಳು ಅಪ್ಪಳಿಸೋ ವಿಡಿಯೋ ನೋಡಿ
Advertisement
Advertisement
ಮುಂಜಾಗ್ರತಾ ಕ್ರಮವಾಗಿ ಸುಲವೆಸಿ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಿಳಿಸಿದ್ದೇವು. ಜೊತೆಗೆ ದುರಸ್ತಿಗೊಂಡ ಕಟ್ಟಡಗಳಲ್ಲಿ ವಾಸಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಸುಟೋಪೊ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ 6.1 ತೀವ್ರತೆಯ ಭೂಕಂಪ ದಾಖಲಾಗಿದ್ದರೆ, ಮಧ್ಯಾಹ್ನ 7.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಸುಲವೆಸಿ ದ್ವೀಪದಿಂದ 56 ಕಿ.ಮಿ ದೂರದಲ್ಲಿರುವ ಡೊಂಗಗಲ್ ನ 9 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿತ್ತು.
Advertisement
2004ರಲ್ಲಿ ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿದ್ದ ಪರಿಣಾಮ, ಹಿಂದೂ ಮಹಾಸಾಗರಲ್ಲಿ ಸುನಾಮಿ ಉಂಟಾಗಿತ್ತು. ಈ ವೇಳೆ 13 ದೇಶಗಳು ಸುನಾಮಿಗೆ ತತ್ತರಿಸಿದ್ದು, ಇಂಡೋನೇಷ್ಯಾದ 1.20 ಲಕ್ಷ, ಭಾರತದಲ್ಲಿ 12 ಸಾವಿರ, ಸೇರಿದಂತೆ ಒಟ್ಟು ಒಟ್ಟು 2.26 ಲಕ್ಷ ಮಂದಿ ಮೃತಪಟ್ಟಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv