ಮುಂಬೈ: ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಆರೋಪಿಸಿದ್ದಾರೆ.
ತಮ್ಮ ಮೇಲೆ ಕೇಳಿಬರುತ್ತಿರುವ ಆರೋಪ ಕುರಿತು ಟ್ವೀಟ್ ಮಾಡಿದ ಅವರು, ಕೆಲವರು ನನ್ನನ್ನು ಅನಿಲ್ ದೇಶಮುಖ್ ಅವರಂತೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಬಯಸುತ್ತಿರುವಂತೆ ತೋರುತ್ತಿದೆ. ನಾನು ಮುಂಬೈ ಪೊಲೀಸ್ ಕಮಿಷನರ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡುತ್ತೇನೆ. ಈ ಕುರಿತು ತನಿಖೆಗೆ ಒತ್ತಾಯಿಸುತ್ತೇನೆ. ಕೆಲವರು ನನ್ನನ್ನು ಹೇಗೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ನನ್ನ ಬಳಿ ದೃಢವಾದ ಸಾಕ್ಷಿ ಇದೆ ಎಂದು ಹೇಳಿದರು. ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಮನೆಮುಂದೆ ಬಂದು ನಿಂತ ಒಂಟಿ ಸಲಗ
Advertisement
— Nawab Malik نواب ملک नवाब मलिक (@nawabmalikncp) November 26, 2021
Advertisement
ಸಚಿವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುವುದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಈ ಬಗ್ಗೆ ಸೂಕ್ತ ತನಿಖೆಯ ಅಗತ್ಯವಿದೆ ಎಂದು ಹೇಳಿದರು. ನಿನ್ನೆ ಟ್ವೀಟ್‍ಗಳಲ್ಲಿ ಮಲಿಕ್, ಇಬ್ಬರು ಪುರುಷರ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಅವರು ತಮ್ಮ ಮನೆಯ ಹೊರಗೆ ಓಡಾಡುತ್ತಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಡಿಜಿಟಲ್ ಕ್ಯಾಮೆರಾ ಹಿಡಿದಿರುವುದು ಕಂಡುಬಂದಿದೆ ಎಂದು ಬರೆದು ಟ್ವೀಟ್ ಮಾಡಿದ್ದರು.
Advertisement
यह लोग इस गाड़ी में सवार पिछले कुछ दिनों से मेरे घर और स्कूल की ‘रेकी’ कर रहे हैं.
अगर कोई इन्हें पहचानता हो तो मुझे जानकारी दे.
जो लोग इस तस्वीर में हैं, मेरा उनसे कहना हैं कि, तुम्हें मेरी कोई जानकारी चाहिए तो आकार मुझसे मिले, मैं सारी जानकारी दे दूँगा pic.twitter.com/ZAmJhqEWoL
— Nawab Malik نواب ملک नवाब मलिक (@nawabmalikncp) November 26, 2021
Advertisement
ಇವರು ಕಳೆದ ಕೆಲವು ದಿನಗಳಿಂದ ಈ ವಾಹನದಲ್ಲಿ ನನ್ನ ಮನೆ ಮುಂದೆ ಬರುತ್ತಾರೆ. ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ನನಗೆ ತಿಳಿಸಿ. ಈ ಚಿತ್ರದಲ್ಲಿ ಇರುವವರಿಗೆ ನನ್ನ ಬಗ್ಗೆ ಮಾಹಿತಿ ಬೇಕಾದರೆ ಅವರಿಗೆ ನಾನು ಹೇಳಲು ಬಯಸುತ್ತೇನೆ. ನಾನು ನನ್ನ ಎಲ್ಲ ಮಾಹಿತಿಯನ್ನು ನೀಡುತ್ತೇನೆ ಎಂದರು.