ಮಟನ್ ಬಳಸಿ ಮಾಡುವ ಈ ಕೀಮಾ ಮಟರ್ ತಯಾರಿಸೋದು ಸುಲಭವಾಗಿದ್ದು, ನಿಮ್ಮ ಇಡೀ ಮನೆಯವರು ಚಪ್ಪರಿಸಿ ಸವಿಯೋದು ಖಂಡಿತಾ. ಕೊಚ್ಚಿದ ಮಟನ್ ಮಾಂಸವನ್ನು (ಖೀಮಾ) ಒಲೆಯಲ್ಲಿ ಅಥವಾ ಸ್ಲೋ ಕುಕ್ಕರ್‌ನಲ್ಲಿ ಮಾಡಬಹುದು. ಭಾನುವಾರದ ನಾನ್‌ವೆಜ್ ಸ್ಪೆಷಲ್‌ಗೆ ಈ ರೆಸಿಪಿಯನ್ನು ನೀವು ಕೂಡಾ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಆಲಿವ್ ಎಣ್ಣೆ – 2 ಟೀಸ್ಪೂನ್
ಸಣ್ಣಗೆ ಕೊಚ್ಚಿದ ಈರುಳ್ಳಿ – 2
ಕೊಚ್ಚಿದ ಮಟನ್ – 450 ಗ್ರಾಂ
ಕರಿ ಮಸಾಲೆ ಪುಡಿ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಕೊಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
ಕೊಚ್ಚಿದ ಶುಂಠಿ – 1 ಟೀಸ್ಪೂನ್
ಟೊಮೆಟೋ ಪ್ಯೂರಿ – 1 ಕಪ್
ದಾಲ್ಚಿನ್ನಿ ಚಕ್ಕೆ – 1 ಇಂಚು
ತಾಜಾ ಬಟಾಣಿ – 1 ಕಪ್
ಮೆಣಸಿನಕಾಯಿ – 2
ಕೊತ್ತಂಬರಿ ಸೊಪ್ಪು – ಅಲಂಕರಿಸಲು
ನಿಂಬೆ ಹಣ್ಣು – ಅರ್ಧ ಇದನ್ನೂ ಓದಿ: ಟ್ರೈ ಮಾಡಿ ನೋಡಿ ಟೇಸ್ಟಿ ರಸ್ ಆಮ್ಲೆಟ್
Advertisement
Advertisement
ಮಾಡುವ ವಿಧಾನ:
* ಮೊಲಿಗೆ ದೊಡ್ಡ ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಈರುಳ್ಳಿ, ಕೀಮಾ, ಕರಿ ಮಸಾಲೆ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
* ಮಾಂಸ ಚೆನ್ನಾಗಿ ಬೆಂದು ಕಂದು ಬಣ್ಣಕ್ಕೆ ಬಂದ ಬಳಿಕ ಟೊಮೆಟೊ ಪ್ಯೂರಿ, ದಾಲ್ಚಿನ್ನಿ ಸೇರಿಸಿ ಎಲ್ಲವನ್ನು ಬೆರೆಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಬಳಸಿ.
* ಸುಮಾರು 20 ನಿಮಿಷಗಳ ಕಾಲ ಆಗಾಗ ಬೆರೆಸುತ್ತಾ ಮುಚ್ಚಳ ಹಾಕದೆ ಬೇಯಿಸಿಕೊಳ್ಳಿ.
* ನಂತರ ಬಟಾಣಿ ಹಾಕಿ 5 ನಿಮಿಷ ಬೇಯಿಸಿಕೊಳ್ಳಿ.
* ನಂತರ ದಾಲ್ಚಿನ್ನಿಯನ್ನು ತೆಗೆದು ಹಾಕಿ, ಕತ್ತರಿಸಿದ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸ ಸೇರಿಸಿ.
* ಇದೀಗ ಟೇಸ್ಟಿ ಕೀಮಾ ಮಟರ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಪರೋಟಾಗೆ ರುಚಿಕರ ಟ್ವಿಸ್ಟ್ – ಚಿಕನ್ ಆಲೂ ಪರೋಟಾ ಮಾಡಿ
Advertisement
Web Stories