ಕಾಶ್ಮೀರಿ ಆಪಲ್ ಎಷ್ಟು ಫೇಮಸ್ ಅಂತ ಎಲ್ಲರಿಗೂ ಗೊತ್ತು. ಜೇನಿನಂತಹ ಸಿಹಿಯಾದ ಇದರ ರುಚಿ ಉಳಿದೆಲ್ಲಾ ಹಣ್ಣುಗಳನ್ನು ಹಿಂದಿಕ್ಕಬಲ್ಲದು. ನಾವಿಂದು ಇದೇ ಕಾಶ್ಮೀರ್ ಆಪಲ್ ಬಳಸಿ ದೇಸೀ ಸಿಹಿಯಾದ ಖೀರ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಈ ರೆಸಿಪಿ ಬೇಕೆಂದರೆ ಇತರ ಸೇಬುಗಳನ್ನೂ ಬಳಸಿ ಮಾಡಬಹುದು. ಆದರೆ ಕಾಶ್ಮೀರಿ ಆಪಲ್‌ನ ರುಚಿ ಯಾರಿಂದ ತಾನೇ ಮರೆಯೋಕೆ ಸಾಧ್ಯ? ಇದೇ ಕಾಶ್ಮೀರಿ ಆಪಲ್ ಬಳಸಿ ಮಾಡಿದ ಖೀರ್ ಕೂಡಾ ಅಷ್ಟೆ. ಒಮ್ಮೆ ಸವಿದರೆ ರುಚಿ ಮರೆಯೋದು ಅಸಾಧ್ಯ.
Advertisement
Advertisement
ಬೇಕಾಗುವ ಪದಾರ್ಥಗಳು:
ಕಾಶ್ಮೀರ್ ಆಪಲ್ – 1
ತುಪ್ಪ – 1 ಟೀಸ್ಪೂನ್
ಹಾಲು – 3 ಕಪ್
ಕೇಸರಿ ಎಸಳು – ಕಾಲು ಟೀಸ್ಪೂನ್
ಕಂಡೆನ್ಸ್ಡ್ ಮಿಲ್ಕ್ – ಕಾಲು ಕಪ್
ಏಲಕ್ಕಿ ಪುಡಿ – ಕಾಲು ಟೀಸ್ಪೂನ್
ಕತ್ತರಿಸಿದ ಒಣ ಹಣ್ಣುಗಳು – 2 ಟೀಸ್ಪೂನ್ ಇದನ್ನೂ ಓದಿ: ದಾಹಕ್ಕೆ ಸವಿಯಿರಿ ಕೂಲ್ ಕೂಲ್ ಕಲ್ಲಂಗಡಿ ಮೊಜಿಟೊ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಆಪಲ್‌ನ ಸಿಪ್ಪೆ ತೆಗೆದು, ತುರಿಯಿರಿ.
* ತಕ್ಷಣ ಅದನ್ನು ಪ್ಯಾನ್‌ಗೆ ಹಾಕಿ ತುಪ್ಪ ಸೇರಿಸಿ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ.
* ಅದರಲ್ಲಿರುವ ನೀರಿನಂಶ ಆವಿಯಾಗುವವರೆಗೆ ಚೆನ್ನಾಗಿ ಬೇಯಿಸಿ. ಬಳಿಕ ಉರಿಯನ್ನು ಆಫ್ ಮಾಡಿ ತಣ್ಣಗಾಗಲು ಬಿಡಿ.
* ಈಗ ಒಂದು ಕಡಾಯಿಯಲ್ಲಿ ಹಾಲನ್ನು ಬಿಸಿ ಮಾಡಿ, ಕೇಸರಿ ಸೇರಿಸಿ ಕುದಿಸಿಕೊಳ್ಳಿ.
* ಬಳಿಕ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ 10 ನಿಮಿಷ ಹಾಲು ದಪ್ಪಗಾಗುವವರೆಗೆ ಕುದಿಸಿ.
* ನಂತರ ಏಲಕ್ಕಿ ಪುಡಿ ಸೇರಿಸಿ, ಮಿಶ್ರಣ ಮಾಡಿ.
* ಉರಿಯನ್ನು ಆಫ್ ಮಾಡಿ ಹಾಲು ಸಂಪೂರ್ಣ ತಣ್ಣಗಾಗಲು ಬಿಡಿ.
* ಈಗ ಬೇಯಿಸಿ ತಣ್ಣಗಾಗಿಸಿದ ಸೇಬನ್ನು ಕುದಿಸಿ ತಣ್ಣಗಾಗಿಸಿದ ಹಾಲಿನ ಮಿಶ್ರಣಕ್ಕೆ ಹಾಕಿ ಬೆರೆಸಿ. (ಹಾಲು ಬೆಚ್ಚಗಿದ್ದರೆ ಹಾಳಾಗುವ ಸಾಧ್ಯತೆಯಿರುತ್ತದೆ)
* ಈಗ ಖೀರ್ ಅನ್ನು ತಣ್ಣಗಾಗಲು 30 ನಿಮಿಷ ಫ್ರಿಡ್ಜ್‌ನಲ್ಲಿ ಇಡಿ.
* ಕೊನೆಯಲ್ಲಿ ಕತ್ತರಿಸಿದ ಒಣ ಹಣ್ಣುಗಳಿಂದ ಅಲಂಕರಿಸಿದರೆ ಕಾಶ್ಮೀರ್ ಆಪಲ್ ಖೀರ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಹಠ ಮಾಡೋ ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಪಪ್ಪಾಯ ಐಸ್‌ಕ್ರೀಮ್