ಸ್ಕ್ವಿಡ್ ರೋಸ್ಟ್ ಹೆಸರು ಕೇಳಿದ್ರೇನೇ ಮೀನು ಖಾದ್ಯ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ಕರ್ನಾಟಕ ಕರಾವಳಿ ಭಾಗದಲ್ಲಿ ಬೊಂಡಾಸ್ ಎಂದೇ ಫೇಮಸ್ ಈ ಮೀನು. ಬೊಂಡಾಸ್ ಸುಕ್ಕ, ಬೊಂಡಾಸ್ ಚಿಲ್ಲಿ ಸೇರಿದಂತೆ ಹಲವು ರೆಸಿಪಿಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಇಂದು ನಾವು ಕೇರಳ ಸ್ಟೈಲ್‌ನಲ್ಲಿ ಸ್ಕ್ವಿಡ್ ರೋಸ್ಟ್ ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ.
Advertisement
ಬೇಕಾಗುವ ಪದಾರ್ಥಗಳು:
ಸ್ಕ್ವಿಡ್ – 1 ಕೆಜಿ
ಈರುಳ್ಳಿ – 2
ಹಸಿರು ಮೆಣಸಿನಕಾಯಿ – 3
ಟೊಮೆಟೊ – 2
ಕರಿಬೇವಿನ ಎಲೆ – ಕೆಲ ಚಿಗುರು
ಶುಂಠಿ – ಒಂದೆರಡು ಇಂಚು
ಬೆಳ್ಳುಳ್ಳಿ – 5
ಹುಣಿಸೆ ಹುಳಿ ರಸ – 2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಒಂದೂವರೆ ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಗರಂ ಮಸಾಲೆ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಮಟನ್ ಕೋಫ್ತಾ ಕರಿ ರೆಸಿಪಿ ನಿಮಗಾಗಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸ್ಕ್ವಿಗಳನ್ನು ಸ್ವಚ್ಛಗೊಳಿಸಿ ಉಂಗುರಾಕಾರದಲ್ಲಿ ಕತ್ತರಿಸಿ ಪಕ್ಕಕ್ಕಿಡಿ.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ ಮತ್ತು ಸಾಸಿವೆ ಸೇರಿಸಿ ಸಿಡಿಸಿ.
* ಬಳಿಕ ಕೊಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಬೆರೆಸಿ.
* ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಉಪ್ಪು, ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ, ನಂತರ 3-4 ನಿಮಿಷಗಳ ಕಾಲ ಬೆರೆಸಿ.
* ಪದಾರ್ಥಗಳು ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಗರಂ ಮಸಾಲೆ ಪುಡಿ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಸೇರಿಸಿ ಮತ್ತು ಕೆಲವು ನಿಮಿಷಗಳ ಕಾಲ ಹುರಿದುಕೊಳ್ಳಿ.
* ಹೆಚ್ಚಿದ ಟೊಮೆಟೊ ಸೇರಿಸಿ ಮೃದುವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಸ್ಕ್ವಿಡ್ ಅನ್ನು ಸೇರಿಸಿ ಮಿಶ್ರಣ ಮಾಡಿ, ನಂತರ ಮುಚ್ಚಳ ಮುಚ್ಚಿ ಬೇಯಿಸಿ.
* ಬಳಿಕ ಮುಚ್ಚಳ ತೆಗೆದು ಮಿಶ್ರಣ ಮಾಡಿ.
* ಇದೀಗ ಕೇರಳ ಶೈಲಿಯ ಸ್ಕ್ವಿಡ್ ರೋಸ್ಟ್ ತಯಾರಾಗಿದ್ದು, ಇದನ್ನು ದಾಲ್, ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ಸುಲಭವಾಗಿ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ? ನೋಡಿ
Advertisement
Web Stories