CinemaKarnatakaLatestMain PostSandalwood

ಸತ್ಯ ಘಟನೆಯಾಧಾರಿತ ‘ಮಠ’ ಸಿನಿಮಾ : ಗುರುಪ್ರಸಾದ್ ಪಾತ್ರ ಏನು?

ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಮಠ. ಜಗ್ಗೇಶ್ ಹಾಗೂ ಗುರು ಪ್ರಸಾದ್ ಜುಗಲ್ ಬಂದಿಯ ಈ ಚಿತ್ರ ಪ್ರೇಕ್ಷಕರನ್ನು‌ ನಕ್ಕು ನಲಿಸಿತ್ತು. ಇದೀಗ ಇದೇ ಹೆಸ್ರಿನ ಸಿನಿಮಾ ಬರ್ತಿದೆ. ಹಾಗಂತ ಈ ಸಿನಿಮಾಗೂ ಆ ಸಿನಿಮಾಗೂ ಸಂಬಂಧವಿಲ್ಲ. ಇದೇ ಬೇರೆ ಅದೇ ಬೇರೆ. ಫಿಲಾಸಫಿಕಲ್, ಕಾಮಿಡಿ ಸತ್ಯ ಘಟನೆಯಾಧಾರಿತ ಮಠ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಬರೋಬ್ಬರಿ 82 ಜನ ಕಲಾವಿದರು ನಟಿಸಿರುವ ಈ ಚಿತ್ರದಲ್ಲಿ ಗುರು ಪ್ರಸಾದ್, ತಬಲನಾಣಿ, ಮಂಡ್ಯ ರಮೇಶ್, ಬಿರಾದಾರ್ ಸೇರಿದಂತೆ ಹಾಸ್ಯಕಲಾವಿದರ ದಂಡೇ ಇದೆ.

ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, 25 ಜಿಲ್ಲೆಗಳಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಕಥೆಗೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಸುಮಾರು ಮುನ್ನೂರು ಮಠಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು ಹೀಗೆ. ಸಾಧುಕೋಕಿಲಾ  ಮಾತಾನಾಡಿ, ನಾನು ಸುಮಾರು ಮಾಡಿರಬಹುದು. ಆದ್ರೆ ಲೆಕ್ಕ ಇಟ್ಟಿಲ್ಲ. ಸುಮಾರು 600 ರಿಂದ 700 ಸಿನಿಮಾ ಮಾಡಿರಬಹುದು. ಜಾಸ್ತಿ, ಕಡಿಮೆ ಎರಡು ಇರಬಹುದು. ಆದ್ರೆ ಗುರು ಪ್ರಸಾದ್ ಮಠ ಸಿನಿಮಾದಲ್ಲಿ ನಾನು ಒಂದೆರೆಡು ಸೀನ್ ನಲ್ಲಿ ಮಾಡಿದ್ದೇನೆ. ಆ ಎಲ್ಲಾವೂ ಹಿಟ್. ಆದ್ರೆ ಈ ಮಠ ಹೆಸ್ರು ತೆಗೆದುಕೊಂಡಿದೆ. ಕಥಾವಸ್ತು ಬೇರೆ. ನಾನು ಮೇಜರ್ ರೋಲ್ ಮಾಡಿದ್ದು, ಆದ್ರೆ ಅದು ನನಗೆ ಕಾಮಿಡಿಯಲ್ಲ. ಇದು ನಿಜ ಜೀವನದ ಕಥೆ. ಒಂದೊಂದು ಪಾತ್ರವೂ ಕಥಾನಕ‌ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

ಗುರು ಪ್ರಸಾದ್ ಮಾತಾನಾಡಿ, ಮನೆ ಕಟ್ಟುವುದು ಸುಲಭ. ಮಠದ ಕಟ್ಟುವುದು ಕಷ್ಟ. 290 ದಿನ ಪಯಣ ಮಾಡಿ ಮಠಗಳಿಗೆ ಭೇಟಿ‌ ಕೊಟ್ಟು ಕಥೆ ಮಾಡಿ ಸಿನಿಮಾ ಮಾಡೋದು ಕಷ್ಟ. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು. ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ, ಮಠ ಸಿನಿಮಾ ಕಥೆಗೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದಾರೆ. ಗುರು ಪ್ರಸಾದ್ ಇಲ್ಲದೇ ಮಠ ಅಪೂರ್ಣ. ಹೀಗಾಗಿ ಅವರನ್ನು ಕೇಳಿದ್ವಿ. ಅವ್ರು ಗ್ರೀನ್ ಸಿಗ್ನಲ್ ಕೊಟ್ಟರು ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ, ರಾಜ್ಯಪ್ರಶಸ್ತಿ ವಿಜೇತ ಸಿ.ರವಿಚಂದ್ರನ್ ಸಂಕಲನ, ವಿ ಮನೋಹರ್ ಸಂಗೀತ ನಿರ್ದೇಶನ, ಯೋಗರಾಜ್ ಭಟ್ಟ್, ವಿ‌ ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯ ಸಿನಿಮಾಕ್ಕಿದೆ.

Leave a Reply

Your email address will not be published.

Back to top button