Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 48 ಗಂಟೆಗಳಲ್ಲಿ ಹಾರ್ಮುಜ್ ತೆರೆಯದಿದ್ದರೆ ಇರಾನ್‌ಗೆ ನರಕ ದರ್ಶನ: ಟ್ರಂಪ್ ವಾರ್ನಿಂಗ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 48 ಗಂಟೆಗಳಲ್ಲಿ ಹಾರ್ಮುಜ್ ತೆರೆಯದಿದ್ದರೆ ಇರಾನ್‌ಗೆ ನರಕ ದರ್ಶನ: ಟ್ರಂಪ್ ವಾರ್ನಿಂಗ್

Latest

48 ಗಂಟೆಗಳಲ್ಲಿ ಹಾರ್ಮುಜ್ ತೆರೆಯದಿದ್ದರೆ ಇರಾನ್‌ಗೆ ನರಕ ದರ್ಶನ: ಟ್ರಂಪ್ ವಾರ್ನಿಂಗ್

Public TV
Last updated: April 5, 2026 7:43 am
Public TV
Share
4 Min Read
Donald Trump Strait Of Hormuz
SHARE

ವಾಷಿಂಗ್ಟನ್: ಮಧ್ಯಪ್ರಾಚ್ಯದ ಭೀಕರ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಲೇ ಇದೆ. ಇದರ ಬೆನ್ನಲ್ಲೇ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಡೆಡ್‌ಲೈನ್‌ವೊಂದನ್ನು ನೀಡಿದ್ದಾರೆ. ಹಾರ್ಮುಜ್ ಜಲಸಂಧಿ (Strait of Hormuz) ತೆರೆಯಲು 48 ಗಂಟೆಗಳ ಗಡುವು ನೀಡಿದ್ದಾರೆ.

ಏಪ್ರಿಲ್ 6ರ ಸೋಮವಾರ ರಾತ್ರಿ 8 ಗಂಟೆವರೆಗೂ ಟ್ರಂಪ್ ಡೆಡ್‌ಲೈನ್ ನೀಡಿದ್ದಾರೆ. ಒಪ್ಪಂದಕ್ಕೆ ಬನ್ನಿ ಇಲ್ಲವೇ ಹಾರ್ಮುಜ್ ತೆರೆಯಿರಿ. ಒಂದು ವೇಳೆ ಹಾರ್ಮುಜ್ ತೆರೆಯದಿದ್ದರೆ ಇರಾನ್‌ಗೆ ನರಕ ದರ್ಶನ ಕಟ್ಟಿಟ್ಟ ಬುತ್ತಿ ಎಂದು ಇರಾನ್‌ಗೆ ಡೆಡ್‌ಲೈನ್ ಸಹಿತ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಂತರಗಂಗೆಯಲ್ಲಿ ನೀರಿಲ್ಲದೇ ಕೋತಿಗಳ ನರಳಾಟ – ಹಸಿವು ನೀಗಿಸಿಕೊಳ್ಳಲು ಪ್ರವಾಸಿಗರ ಮೇಲೆ ಅಟ್ಯಾಕ್!

ದಕ್ಷಿಣ ಇರಾನ್‌ನ ಬುಷೆಹರ್ ಪರಮಾಣು ಸ್ಥಾವರದ ಪ್ರದೇಶವನ್ನು ಗುರಿಯಾಗಿಸಿ ಅಮೆರಿಕ, ಇಸ್ರೇಲ್ ಮತ್ತೊಂದು ಜಂಟಿ ದಾಳಿ ಮಾಡಿವೆ. ಈ ದಾಳಿಯಲ್ಲಿ ಒಂದು ಕ್ಷಿಪಣಿ ಬುಷೆಹರ್ ಪರಮಾಣು ಸ್ಥಾವರದ ಸಮೀಪದ ಪ್ರದೇಶಕ್ಕೆ ಅಪ್ಪಳಿಸಿದ್ದು, ಸ್ಥಾವರದ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾನೆ. ಸ್ಥಾವರಕ್ಕೆ ಯಾವುದೇ ಹಾನಿಯಾಗಿಲ್ಲ, ಆದರೆ ಸಮೀಪದ ಕಟ್ಟಡಗಳಿಗೆ ಹಾನಿಯಾಗಿದೆ. ಇದನ್ನೂ ಓದಿ: ಇರಾನ್ ಯುದ್ಧ – ಅಮೆರಿಕದ ಪ್ರತಿಷ್ಠೆಗೆ ಪೆಟ್ಟು!

ದಕ್ಷಿಣ ಇರಾನ್‌ನ ಖುಜೆಸ್ತಾನ್ ಪ್ರಾಂತದಲ್ಲಿ ಪೆಟ್ರೊಕೆಮಿಕಲ್ಸ್ ಸ್ಥಾವರದ ಮೇಲೆಯೂ ವೈಮಾನಿಕ ದಾಳಿ ನಡೆದಿದ್ದು, ಐದು ಮಂದಿ ಗಾಯಗೊಂಡಿದ್ದಾರೆ. ಮಹಶಹರ್‌ನ ವಿಶೇಷ ಪೆಟ್ರೊಕೆಮಿಕಲ್ಸ್ ವಲಯದಲ್ಲಿ ಮೂರು ಸಂಸ್ಥೆಗಳ ಮೇಲೆ ದಾಳಿ ನಡೆದಿದ್ದು, ಸ್ಫೋಟಗಳು ಸಂಭವಿಸಿವೆ. ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬಿಷ್ಣೋಯ್‌ ಸ್ಪಿನ್‌ ಮ್ಯಾಜಿಕ್, ಧ್ರುವ್‌-ಜೈಸ್ವಾಲ್‌‌ ಬೆಂಕಿ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 6 ರನ್‌ಗಳ ರೋಚಕ ಜಯ

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಈ ಜಂಟಿ ದಾಳಿಯನ್ನು ಇರಾನ್ ಖಂಡಿಸಿದೆ. ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಬುಷೆಹರ್ ಪರಮಾಣು ಸ್ಥಾವರದ ಬಳಿಗೆ ಇಸ್ರೇಲ್, ಅಮೆರಿಕ ಶನಿವಾರ ನಡೆಸಿದ ದಾಳಿಗಳು ಇರಾನ್ ಮತ್ತು ವಿಶಾಲವಾದ ಗಲ್ಫ್ ಪ್ರದೇಶಕ್ಕೆ ಗಮನಾರ್ಹ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ. ನಮ್ಮ ಪೆಟ್ರೊಕೆಮಿಕಲ್ ಸ್ಥಾವರಗಳ ಮೇಲಿನ ದಾಳಿಗಳು ನೈಜ ಉದ್ದೇಶವನ್ನು ತಿಳಿಸುತ್ತವೆ. ಬುಷೆಹರ್ ಸ್ಥಾವರದ ಮೇಲೆ 4 ಬಾರಿ ದಾಳಿ ನಡೆದಿದೆ. ಉಕ್ರೇನ್‌ನ ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ನೀಡಿದ ಗಮನಕ್ಕೆ ಹೋಲಿಸಿದರೆ ಬುಷೆಹರ್ ಸ್ಥಾವರದ ಸುರಕ್ಷತೆಯ ಬಗ್ಗೆ ಕಾಳಜಿಯ ಕೊರತೆ ಎದ್ದು ಕಾಣುತ್ತದೆ ಎಂದು ಅರಾಘ್ಚಿ ಟೀಕಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನ – ಕಲಬುರಗಿಯಲ್ಲಿ ಕೊಲೆ ಆರೋಪಿ ಕಾಲಿಗೆ ಗುಂಡೇಟು

ಇರಾನ್‌ನ 30 ವಿವಿಗಳ ಮೇಲೆ ದಾಳಿ:
ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದಾಗಿನಿಂದ ಅಮೆರಿಕ-ಇಸ್ರೇಲ್ ಇರಾನ್‌ನಾದ್ಯಂತ 30ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಮೇಲೆ ನೇರ ವೈಮಾನಿಕ ದಾಳಿ ನಡೆಸಿವೆ. ಇರಾನ್‌ನ ಪರಮಾಣು ಮತ್ತು ಶಸ್ತ್ರಾಸ್ತ್ರ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಗುರಿಯಾಗಿಸಿರುವುದಾಗಿ ಇಸ್ರೇಲ್ ಪ್ರತಿಪಾದಿಸುತ್ತಿದೆ. ಈ ದಾಳಿಯ ಭೀತಿ ಹಿನ್ನೆಲೆ ಇರಾನ್‌ನಲ್ಲಿ ಎಲ್ಲಾ ವಿಶ್ವವಿದ್ಯಾಲಗಳು ಮುಚ್ಚಿದ್ದು ಆನ್‌ಲೈನ್ ಕ್ಲಾಸ್‌ಗಳ ಮೊರೆ ಹೋಗಲಾಗಿದೆ. ಇದನ್ನೂ ಓದಿ: ಪಂಜಾಬ್ ಬಿಜೆಪಿ ಪ್ರಧಾನ ಕಚೇರಿ ಬಳಿ ಸ್ಫೋಟ ಪ್ರಕರಣ – ಐವರು ಅರೆಸ್ಟ್‌

ಈ ನಡುವೆ ಅಮೆರಿಕದೊಂದಿಗೆ ಶಾಂತಿ ಮಾತುಕತೆ ಮುರಿದು ಬಿದ್ದಿದೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ಇರಾನ್, ಮಧ್ಯಸ್ಥಿಕೆ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಪ್ರಯಾಣಿಸಲು ಇರಾನ್ ಎಂದಿಗೂ ಆಹ್ವಾನವನ್ನು ನಿರಾಕರಿಸಿಲ್ಲ ಎಂದು ಹೇಳಿದೆ. ಅತ್ತ ಇರಾನ್-ಅಮೆರಿಕ ಮಧ್ಯಸ್ಥಿಕೆ ವಿಫಲವಾಗಿದೆ ಎಂಬ ವರದಿಗಳು ಆಧಾರರಹಿತ ಎಂದು ಪಾಕಿಸ್ತಾನ ಹೇಳಿದೆ. ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸುವ ತನ್ನ ಪ್ರಯತ್ನಗಳು ಹಿನ್ನಡೆಯನ್ನು ಎದುರಿಸಿವೆ ಎಂದು ಸೂಚಿಸುವ ಮಾಧ್ಯಮ ವರದಿಗಳನ್ನು ಪಾಕಿಸ್ತಾನ ತಳ್ಳಿಹಾಕಿದೆ. ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ಅಂತಹ ಹೇಳಿಕೆಗಳನ್ನು ಆಧಾರರಹಿತ ಎಂದು ಹೇಳಿದರು. ಇದನ್ನೂ ಓದಿ: ದಾವಣಗೆರೆ | 50,000 ಲಂಚ ಸ್ವೀಕರಿಸುವಾಗ ʻಲೋಕಾʼ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಸಂಘರ್ಷದ ನಡುವೆಯೂ ಇರಾನ್ ಮಾನವೀಯತೆಗೆ ಆದ್ಯತೆ ನೀಡಿದೆ. ಹಾರ್ಮುಜ್ ಮೂಲಕ ಅಗತ್ಯ ವಸ್ತುಗಳನ್ನು ಸಾಗಿಸುವ ಹಡಗುಗಳಿಗೆ ಇರಾನ್ ಅನುಮತಿ ನೀಡಿದೆ. ನಿರ್ದಿಷ್ಟ ಶಿಷ್ಟಾಚಾರಗಳ ಅಡಿಯಲ್ಲಿ, ಹಾರ್ಮುಜ್ ಜಲಸಂಧಿಯ ಮೂಲಕ ಇರಾನಿನ ಬಂದರುಗಳು ಅಥವಾ ಹತ್ತಿರದ ಜಲಪ್ರದೇಶಗಳಿಗೆ ಅಗತ್ಯ ಸರಕುಗಳು ಮತ್ತು ಮಾನವೀಯ ಸರಬರಾಜುಗಳನ್ನು ಸಾಗಿಸುವ ಹಡಗುಗಳನ್ನು ಸಾಗಿಸಲು ಇರಾನ್ ಅನುಮೋದನೆ ನೀಡಿದೆ. ಇದನ್ನೂ ಓದಿ: ತೀರ್ಥಹಳ್ಳಿ | ನಾಡಬಾಂಬ್‌ ಸ್ಫೋಟ – ವೃದ್ಧೆಗೆ ಗಂಭೀರ ಗಾಯ

ಇನ್ನು ಇಸ್ಫಹಾನ್ ಪ್ರಾಂತ್ಯದ ಮೇಲೆ ಅಮೆರಿಕದ ಎಂಕ್ಯೂ-1 ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಕೂಡ ಹೇಳಿಕೊಂಡಿದೆ. ಈ ಹಿಂದೆ ಎರಡು ಅಮೆರಿಕದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದನ್ನೂ ಓದಿ: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸುವುದು ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ: ಡಾ.ಹರೀಶ್ ಕುಮಾರ್

ಒಟ್ಟಾರೆ ಈ ಸಂಘರ್ಷ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದ್ದು, ಮುಂದಿನ 48 ಗಂಟೆಯಲ್ಲಿ ಇನ್ನಷ್ಟು ಭೀಕರ ದಾಳಿ ಪ್ರತಿದಾಳಿಗಳು ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಹಿಟ್ ‍& ರನ್ ಅಪಘಾತ ಪ್ರಕರಣಗಳಲ್ಲಿ 26 ಸಂತ್ರಸ್ತರಿಗೆ ಪರಿಹಾರ ಧನ ಮಂಜೂರು

TAGGED:americadonald trumpiranIran Israel WarIsraelMojtaba Khameneiಅಮೆರಿಕಇರಾನ್ಇರಾನ್‌ ಇಸ್ರೇಲ್‌ ವಾರ್‌ಇಸ್ರೇಲ್ಡೊನಾಲ್ಡ್ ಟ್ರಂಪ್ಮೊಜ್ತಬಾ ಖಮೇನಿಹಾರ್ಮುಜ್ ಜಲಸಂಧಿ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Bengaluru Rains 1
Bengaluru City

25 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ಮಳೆ – 170 ಮರಗಳು ಧರಾಶಾಹಿ, 68 ಕಡೆ ಜಲಾವೃತ

Public TV
By Public TV
43 minutes ago
pm modi meeting
Bengaluru City

ಬೆಂಗಳೂರಲ್ಲಿ ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿದು 7 ಜನ ಸಾವು: ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ

Public TV
By Public TV
43 minutes ago
Sunrisers Hyderabad 2
Cricket

ವಾಂಖೆಡೆಯಲ್ಲಿ ಮುಂಬೈ ಹುರಿದು ಮುಕ್ಕಿದ ಸನ್‌ ರೈಸರ್ಸ್‌ – ಹೈದ್ರಾಬಾದ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ

Public TV
By Public TV
55 minutes ago
COURT
Court

ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ – ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ

Public TV
By Public TV
1 hour ago
udupi accident
Latest

ಉಡುಪಿ| ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಬಸ್ ಡಿಕ್ಕಿ – ಮೂರು ಮಂದಿ ದುರ್ಮರಣ

Public TV
By Public TV
1 hour ago
Bengaluru Rain 2 1
Bengaluru City

Bengaluru Rain Alert | ಬೆಂಗಳೂರಲ್ಲಿ ರಣ ಮಳೆಗೆ ಮತ್ತೆರಡು ಬಲಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?