ನವದೆಹಲಿ: ಮುಂದಿನ ದಿನಗಳಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಭಾರತದಲ್ಲಿ (India) ಭಾರೀ ಇಳಿಕೆಯಾಗುವ ಸಾಧ್ಯತೆಯಿದೆ.
ಹೌದು. ಡೊನಾಲ್ಡ್ ಟ್ರಂಪ್ (Donald Trump) ಆರಂಭಿಸಿದ ಸುಂಕ ಸಮರ ಚೀನಾದ (China) ಮೇಲೆ ಭಾರೀ ಪರಿಣಾಮ ಬೀಳಲಿದೆ. ವ್ಯಾಪಾರ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಹಲವಾರು ಚೀನೀ ಎಲೆಕ್ಟ್ರಾನಿಕ್ (China Electronics) ಘಟಕ ತಯಾರಕರು ಭಾರತೀಯ ಕಂಪನಿಗಳಿಗೆ 5% ರಷ್ಟು ರಿಯಾಯಿತಿಗಳನ್ನು ನೀಡಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ
ಚೀನಾ ತಯಾರಕರು ಹೆಚ್ಚುವರಿ ದಾಸ್ತಾನುಗಳನ್ನು ಹೊಂದಿದ್ದಾರೆ. ಆ ಉತ್ಪನ್ನಗಳನ್ನು ಮಾರಾಟ ಮಾಡಲು ಚೀನಾ ರಿಯಾಯಿತಿ ನೀಡಲು ಮುಂದಾಗಿದೆ. ಈ ನಿರ್ಧಾರದಿಂದ ಭಾರತದಲ್ಲಿ ಫೋನ್, ಟಿವಿ, ಗ್ರಾಹಕ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಬಹಳ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: 75 ದೇಶಗಳಿಗೆ 90 ದಿನ ಬ್ರೇಕ್ – ಚೀನಾಗೆ 125% ಟ್ಯಾಕ್ಸ್ ಸಮರ
ಸುಂಕ ಸಮರ ಆರಂಭಿಸುವ ಮೊದಲು ಚೀನಾ ಅಮೆರಿಕದ ವಸ್ತುಗಳಿಗೆ 67% ತೆರಿಗೆ ವಿಧಿಸುತ್ತಿತ್ತು. ಟ್ರಂಪ್ ಅವರು ಏ.2 ರಂದು ಚೀನಾ ವಸ್ತುಗಳಿಗೆ 34% ತೆರಿಗೆ ಹಾಕುವುದಾಗಿ ಘೋಷಣೆ ಮಾಡಿದ್ದರು. ಇದರಿಂದಾಗಿ ಮೊದಲಿದ್ದ 20% ಸೇರಿ 54% ತೆರಿಗೆ ಏರಿಕೆಯಾಗಿತ್ತು.
ಅಮೆರಿಕದ ನಿರ್ಧಾರದಿಂದ ಸಿಟ್ಟಾದ ಚೀನಾ ಮತ್ತೆ 34% ಏರಿಕೆ ಮಾಡಿತ್ತು. ಇದಕ್ಕೆ ಸಿಟ್ಟಾದ ಟ್ರಂಪ್ ತೆರಿಗೆಯನ್ನು 104% ಏರಿಕೆ ಮಾಡುತ್ತಾರೆ. ಅಮೆರಿಕದ ನಿರ್ಧಾರದಿಂದ ಮತ್ತೆ ಸಿಟ್ಟಾದ ಚೀನಾ ಅಮೆರಿಕದ ವಸ್ತುಗಳ ಮೇಲೆ 84% ತೆರಿಗೆ ಹಾಕಿತು. ಚೀನಾ ನಿರ್ಧಾರದಿಂದ ಆಕ್ರೋಶಗೊಂಡ ಟ್ರಂಪ್ ಈಗ ಚೀನಾದ ವಸ್ತುಗಳ ಮೇಲೆ 125% ತೆರಿಗೆ ಹಾಕಿದ್ದಾರೆ.