Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇರಾನ್‌ಗೆ ಸುಂಕ ಪಾವತಿಸುವ ಯಾವುದೇ ಹಡಗುಗಳನ್ನ ಬಿಡಲ್ಲ – ವಿಶ್ವಕ್ಕೆ ಟ್ರಂಪ್‌ ವಾರ್ನಿಂಗ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇರಾನ್‌ಗೆ ಸುಂಕ ಪಾವತಿಸುವ ಯಾವುದೇ ಹಡಗುಗಳನ್ನ ಬಿಡಲ್ಲ – ವಿಶ್ವಕ್ಕೆ ಟ್ರಂಪ್‌ ವಾರ್ನಿಂಗ್‌

Latest

ಇರಾನ್‌ಗೆ ಸುಂಕ ಪಾವತಿಸುವ ಯಾವುದೇ ಹಡಗುಗಳನ್ನ ಬಿಡಲ್ಲ – ವಿಶ್ವಕ್ಕೆ ಟ್ರಂಪ್‌ ವಾರ್ನಿಂಗ್‌

Public TV
Last updated: April 12, 2026 8:43 pm
Public TV
Share
3 Min Read
Donald Trump Strait Of Hormuz
SHARE

ವಾಷಿಂಗ್ಟನ್‌/ಟೆಹ್ರಾನ್‌: ಇಡೀ ಜಗತ್ತು ಈಗಷ್ಟೇ ನಿಟ್ಟುಸಿರು ಬಿಟ್ಟಿತ್ತು. ಅಮೆರಿಕ ಮತ್ತು ಇರಾನ್ (US & Iran) ನಡುವೆ ಸಂಧಾನವಾಗಿ ಯುದ್ಧ ನಿಲ್ಲುತ್ತೆ, ಜಗತ್ತು ಶಾಂತಿಯಾಗುತ್ತೆ ಅಂತ ಕೋಟ್ಯಂತರ ಜನರು ಕನಸು ಕಂಡಿದ್ದರು. ಆದ್ರೆ, ಆ ಎಲ್ಲಾ ಆಸೆಗಳ ಮೇಲೆ ಈಗ ತಣ್ಣೀರು ಎರಚಿದಂತಾಗಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ (Islamabad) ನಡೆದ 21 ಗಂಟೆಗಳ ಹೈವೋಲ್ಟೇಜ್ ಸಂಧಾನ ವಿಫಲವಾಗಿದೆ. ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಕೆರಳಿ ಕೆಂಡವಾಗಿದ್ದು, ಮತ್ತೆ ಈ ಯುದ್ಧ ಇನ್ನಷ್ಟು ತೀವ್ರವಾಗುವ ಭೀತಿ ಶುರುವಾಗಿದೆ.

WhatsApp Image 2026 04 12 at 19.40.01

ಪರಮಾಣು ಒಪ್ಪಂದಕ್ಕೆ (Nuclear deal) ಇರಾನ್‌ ಒಪ್ಪದ ನಿಲುವನ್ನು ಉಲ್ಲೇಖಿಸಿ, ಹಾರ್ಮುಜ್‌ ಜಲಸಂಧಿ (Strait of Hormuz) ಮೂಲಕ ಹಾದುಹೋಗುವ ಎಲ್ಲಾ ಹಡಗುಗಳನ್ನ ತಡೆಹಿಡಿಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯುಎಸ್‌ ನೌಕಾಪಡೆಗೆ ಸೂಚನೆ ನೀಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್‌ ಸೋಷಿಯಲ್‌ನಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಫಾ ತಂತ್ರ ಬಳಸಿ ಲೆಬನಾನ್‌ನ್‌ ಮೇಲೆ ಇಸ್ರೇಲ್‌ ದಾಳಿ – ಮೂರು ಗ್ರಾಮ ಸಂಪೂರ್ಣ ನೆಲಸಮ

ಹಾರ್ಮುಜ್‌ ಜಲಸಂಧಿಯಲ್ಲಿ ಇರಾನ್‌ ಕಾನೂನು ಬಾಹಿರವಾಗಿ ಸುಂಕ ವಸೂಲಿ ಮಾಡುತ್ತಿದೆ. ಈ ರೀತಿ ಸುಂಕ (Hormuz Toll) ಪಾವತಿಸಿ ಹಾರ್ಮುಜ್‌ ಜಲಸಂಧಿ ಮೂಲಕ ಹಾದುಹೋಗುವ ಯಾವುದೇ ಹಡಗುಗಳನ್ನು ಅಂತಾರಾಷ್ಟ್ರೀಯ ಜಲಗಡಿಯೊಳಗೆ ಬಿಡುವುದಿಲ್ಲ. ವಿಶ್ವದ ಅತ್ಯುತ್ತಮ ಅಮೆರಿಕ ನೌಕಾಪಡೆಯು ಹಾರ್ಮುಜ್‌ ಜಲಸಂಧಿಯ ಮೂಲಕ ಹಾದುಹೋಗುವ ಎಲ್ಲಾ ಹಡಗುಗಳನ್ನು ನಿರ್ಬಂಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ ಎಂದು ಹೇಳಿದ್ದಾರೆ.

Hormuz

ಈಗಾಗಲೇ ಇರಾನ್‌ಗೆ ಸುಂಕ ಪಾವತಿಸುವ ಪ್ರತಿಯೊಂದು ಹಡಗುಗಳನ್ನ ಹುಡುಕಿ ತಡೆಹಿಡಿಯುವಂತೆ ನಮ್ಮ ನೌಕಾಪಡೆಗೆ ಸೂಚಿಸಿದ್ದೇನೆ. ಅಕ್ರಮ ಸುಂಕ ಪಾವತಿಸುವ ಯಾರಿಗೂ ಸಮುದ್ರದಲ್ಲಿ ಸುರಕ್ಷಿತ ಮಾರ್ಗ ಇರುವುದಿಲ್ಲ. ಅಲ್ಲದೇ ಇರಾನಿಯನ್ನರು ಜಲಸಂಧಿಯಲ್ಲಿ ಹಾಕಿದ ಮೈನ್ಸ್‌ಗಳನ್ನೂ ನಾಶ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Explainer | ಹಾರ್ಮುಜ್‌ ಜಲಸಂಧಿಯಲ್ಲಿ ಸ್ಫೋಟಕ ಇರಿಸಿದ ಇರಾನ್‌ – ತೆಗೆದುಹಾಕಲು ಸಿದ್ಧ ಎಂದ ಜಪಾನ್‌; ಹೇಗೆ ಸಾಧ್ಯ?

ಪ್ರಮುಖ ಅಂತಾರಾಷ್ಟ್ರೀಯ ಜಲಮಾರ್ಗ ಹಾರ್ಮುಜ್‌ ಅನ್ನು ಮುಕ್ತಗೊಳಿಸುವ ಭರವಸೆಯಿಂದ ಇರಾನ್‌ ಹಿಂದೆ ಸರಿಯುತ್ತಿದೆ. ಇದರಿಂದ ಜಾಗತಿಕ ಸರಕು ಸಾಗಣೆಗೆ ಅಡ್ಡಿಯಾಗಿದೆ. ಇರಾನ್ ಏಕಪಕ್ಷೀಯವಾಗಿ ಜಲಸಂಧಿ ಬಂದ್ ಮಾಡಿದ್ದರಿಂದ ಜಾಗತಿಕ ಆರ್ಥಿಕತೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಹಾರ್ಮುಜ್‌ಗೆ ದಿಗ್ಬಂಧನ ಹಾಕಲು ನೌಕಾಪಡೆ ನಿರ್ಧರಿಸಿದೆ. ಜೊತೆಗೆ ಜಲಸಂಧಿಯಲ್ಲಿ ಇರಾನ್ ಅಳವಡಿಸಿರುವ ಮೈನ್ಸ್‌ಗಳನ್ನು ತೆರವುಗೊಳಿಸಲು ನೌಕಾಪಡೆ ಕಾರ್ಯಾಚರಣೆ ಶುರು ಮಾಡಲಿದೆ. ಒಂದು ವೇಳೆ ಶಾಂತಿಯುತವಾಗಿ ಸಾಗುವ ಹಡಗುಗಳ ಮೇಲೆ ಇರಾನ್ ಗುಂಡು ಹಾರಿಸಿದರೆ, ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಜನತೆಗೆ ಮತ್ತೊಂದು ಶಾಕ್‌ – ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

Naval Mines 1

ಪರಮಾಣು ಮಾತುಕತೆ ಬಗೆಹರಿದಿಲ್ಲ
ಇಸ್ಲಾಮಾಬಾದ್‌ನಲ್ಲಿ ಇರಾನಿನ ಪ್ರತಿನಿಧಿಗಳೊಂದಿಗೆ ಸುದೀರ್ಘ ಚರ್ಚೆಗಳ ನಂತರ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇತರ ರಾಯಭಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ತಮಗೆ ಮಾಹಿತಿ ನೀಡಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ. ಮಾತುಕತೆಗಳು ಸುಮಾರು 20 ಗಂಟೆಗಳ ಕಾಲ ನಡೆದವು ಮತ್ತು ಹೆಚ್ಚಿನ ಅಂಶಗಳಿಗೆ ಒಪ್ಪಿಗೆ ನೀಡಲಾಗಿದೆ, ಆದ್ರೆ, ಮುಖ್ಯವಾದ ಅಂಶವೆಂದ್ರೆ ಪರಮಾಣು ಯುದ್ಧ. ಈ ವಿಷಯ ಬಗೆಹರಿಯದೆ ಉಳಿದಿದೆ. ಇರಾನ್‌ ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸಲು ಇಷ್ಟವಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಇರಾನ್‌-ಅಮೆರಿಕ ಸಂಧಾನ ಮಾತುಕತೆ ವಿಫಲ – ‘ಕಹಿ ಸುದ್ದಿ’ ಎಂದ ಯುಎಸ್‌ ಉಪಾಧ್ಯಕ್ಷ

naval mines

ಅಕ್ರಮ ಟೋಲ್‌ ವಿರುದ್ಧ ಟ್ರಂಪ್‌ ಎಚ್ಚರಿಕೆ
ಇನ್ನೂ ಹಾರ್ಮುಜ್‌ ಜಲಸಂಧಿಯಲ್ಲಿ ಸಾಗುವ ಪ್ರತಿ ತೈಲ ಬ್ಯಾರಲ್‌ಗೆ 1 ಡಾಲರ್‌ ಸುಂಕ ವಿಧಿಸುವ ಇರಾನ್‌ ಕ್ರಮವನ್ನು ಟ್ರಂಪ್‌ ಅಕ್ರಮ, ವಿಶ್ವದ ಸುಲಿಗೆ ಎಂದು ಕರೆದಿದ್ದಾರೆ. ಆದ್ರೆ ಅಮೆರಿಕವನ್ನ ಸುಲಿಗೆ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಜಲಸ್ಫೋಟಕಗಳ ಪತ್ತೆಗೆ ಮುಂದಾದ ಅಮೆರಿಕ
ಹಾರ್ಮುಜ್‌ ಜಲಸಂಧಿಯಲ್ಲಿ ಸಂಚಾರ ಸುಗಮಗೊಳಿಸಲು ಇರಾನ್‌ ಇರಿಸಿರುವ ಜಲಸ್ಫೋಟಕಗಳನ್ನ ತೆರುವುಗೊಳಿಸುವ ಕಾರ್ಯಾಚರಣೆಯನ್ನು ಅಮೆರಿಕ ನೌಕಾಪಡೆ ಮಾಡುತ್ತಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದರು. ಇದಾದ ಮರುದಿನ ಟ್ರಂಪ್‌ ಅವರ ಹೇಳಿಕೆ ಬಂದಿದೆ.

TAGGED:donald trumpHormuz TollshipsStrait of HormuzUS Iran WarUS Navy
Share This Article
Facebook Whatsapp Whatsapp Telegram

Cinema news

Asha Bhosle 2
10ನೇ ವಯಸ್ಸಿನಲ್ಲಿ ಶುರುವಾದ ಗಾಯನದ ಬದುಕು – `ಸ್ವರʼ ನಿಲ್ಲಿಸಿದ ಆಶಾ ಭೋಸ್ಲೆ
Cinema Latest Main Post National
Actor Harish
ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ – ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು
Cinema Crime Karnataka Kodagu Latest Sandalwood Top Stories
Asha Bhosle and Narendra Modi
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಆಶಾ ಭೋಸ್ಲೆ: ಮೋದಿ ಕಂಬನಿ
Bollywood Cinema Latest Main Post National
Asha Bhosle
ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ
Bollywood Cinema Latest Main Post National

You Might Also Like

siddaramaiah 2
Bengaluru City

ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ದೆಹಲಿಗೆ ಭೇಟಿ ನೀಡೋದ್ರಲ್ಲಿ ತಪ್ಪಿಲ್ಲ: ಸಿದ್ದರಾಮಯ್ಯ

Public TV
By Public TV
3 minutes ago
Virat Kohli IPL 2026
Cricket

ಹೆಲ್ಮೆಟ್‌, ಗ್ಲೌಸ್‌ ಎಸೆದು ಕೊಹ್ಲಿ ಆಕ್ರೋಶ

Public TV
By Public TV
8 minutes ago
Donald Trump 1
Latest

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಹಾರ್ಮುಜ್ ದಾಟದೇ ಯೂಟರ್ನ್‌ ಹೊಡೆದ 2 ಪಾಕ್‌ ತೈಲ ಟ್ಯಾಂಕರ್‌ಗಳು

Public TV
By Public TV
36 minutes ago
Siddaramaiah 2
Districts

ನಾಲ್ವಾರ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಸಿಎಂ ಭೇಟಿ – ಸಿದ್ದರಾಮಯ್ಯಗೆ ಚಿನ್ನದ ಉಂಗುರ ತೊಡಿಸಿ ಸತ್ಕಾರ

Public TV
By Public TV
40 minutes ago
Public tv Arun Badiger Best Anchor Award Bidar KUWJ Annual Conference Karnataka Media 2
Bidar

KUWJ ವಾರ್ಷಿಕ ಸಮ್ಮೇಳನ| ಅರುಣ್ ಬಡಿಗೇರ್‌ಗೆ ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ ಪ್ರದಾನ

Public TV
By Public TV
1 hour ago
Corporate Jihad TCS BPO Nashik
Crime

Corporate Jihad | ಹಿಂದೂ ಮಹಿಳಾ ಉದ್ಯೋಗಿಗಳಿಗೆ ಬಲವಂತವಾಗಿ ಗೋಮಾಂಸ ಸೇವಿಸುವಂತೆ, ನಮಾಜ್‌ ಮಾಡುವಂತೆ ಒತ್ತಾಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?