ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರ ಸ್ವೀಕರಿಸಿದ್ದಾರೆ. ಇದೇ ವೇಳೆ ಅಮೆರಿಕನ್ನರ ಏಳಿಗೆಗಾಗಿ ವಿದೇಶಗಳಿಗೆ ತೆರಿಗೆ ವಿಧಿಸುವ ಮಹತ್ವದ ಘೋಷಣೆ ಮಾಡಿರುವ ಟ್ರಂಪ್ 80 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಅಲ್ಲದೇ ಶ್ವೇತಭವನ ತಲುಪಿದ ಬಳಿಕ ಇನ್ನಷ್ಟು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಲಿದ್ದಾರೆ ಎಂದು ವರದಿಗಳು ತಿಳಿಸಿವೆ.
Advertisement
ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡ ಟ್ರಂಪ್, ವಿಶೇಷ ಅಧಿಕಾರ ಬಳಸಿ 2021ರಲ್ಲಿ ನಡೆದ ವಾಷಿಂಗ್ಟನ್ ಗಲಭೆ ಪ್ರಕರಣದ ಆರೋಪಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಮಹತ್ವದ ಆದೇಶಗಳಿಗೆ ಸಹಿ ಹಾಕುವ ಮುನ್ನವೇ ಜೋ ಬೈಡನ್ ಅವರ ಅವಧಿಯಲ್ಲಿ ತೆಗೆದುಕೊಳ್ಳಲಾದ 80 ವಿನಾಶಕಾರಿ ಕ್ರಮಗಳನ್ನು ಹಿಂಪಡೆಯುವುದಾಗಿ ಟ್ರಂಪ್ ಗುಡುಗಿದ್ದಾರೆ. ಇದನ್ನೂ ಓದಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ – ಮೋದಿ ವಿಶ್
Advertisement
The 60th Presidential Inauguration Ceremony https://t.co/kTB4w2VCdI
— Donald J. Trump (@realDonaldTrump) January 20, 2025
Advertisement
ಪ್ರಮುಖ ಆದೇಶಗಳೇನು?
ಅಮೆರಿಕದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು. ಮೆಕ್ಸಿಕೋ ಗಡಿಗೆ ಸೇನೆ ಕಳುಹಿಸುವುದು ನಮ್ಮ ಆದ್ಯತೆ ಆಗಿದೆ. ಅಲ್ಲದೇ ಅಮೆರಿಕ ಪ್ರವೇಶಿಸುತ್ತಿರುವ ಅಕ್ರಮ ವಲಸಿಗರನ್ನು ಸಂಪೂರ್ಣವಾಗಿ ತಡೆಯುವುದು. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನ ದೇಶದಿಂದ ಹೊರಹಾಕುವುದು ಆದ್ಯತೆಯಾಗಿದೆ. ಅಲ್ಲದೇ ಅಮೆರಿಕ ಗಡಿಯುದ್ಧಕ್ಕೂ ಸೇನೆ ನಿಯೋಜಿಸಲು ತಕ್ಷಣ ಆದೇಶ ಹೊರಡಿಸುತ್ತೇನೆ ಎಂಬುದಾಗಿಯೂ ಟ್ರಂಪ್ ಘೋಷಿಸಿದ್ದಾರೆ.
Advertisement
ಅಷ್ಟೇ ಅಲ್ಲದೇ ಪಳೆಯುಳಿಕೆ ಇಂಧನ ಉತ್ಪಾದನೆಯನ್ನು ಹೆಚ್ಚಿಸುವುದು, ಪರಿಸರ ನಿಯಮಗಳನ್ನು 2021ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಹಿಂತೆಗೆದುಕೊಳ್ಳುವ ಪ್ರಮುಖ ಆದೇಶಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕದನ ವಿರಾಮದ ಮೊದಲ ಹೆಜ್ಜೆ ಯಶಸ್ವಿ: ಹಮಾಸ್‌ನಿಂದ ಮೂವರು ಒತ್ತೆಯಾಳು ಬಿಡುಗಡೆ
ವರ್ಕ್‌ಫ್ರಮ್ ಹೋಮ್ ರದ್ದು:
ಫೆಡರಲ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕೊನೆಗೊಳಿಸುವ ಆದೇಶವನ್ನು ಟ್ರಂಪ್ ಮೊದಲು ಪ್ರಕಟಿಸಿದ್ದಾರೆ. ಸರ್ಕಾರದ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಏಜೆನ್ಸಿ ಮುಖ್ಯಸ್ಥರು, ವಿಭಾಗಗಳು ಆದಷ್ಟು ಬೇಗ ವರ್ಕ್ ಫ್ರಮ್ ಹೋಮ್ ನಿಯಮವನ್ನು ಹಿಂತೆಗೆದುಕೊಳ್ಳಬೇಕು. ಅಗತ್ಯಬಿದ್ದಲ್ಲಿ ಆಯಾ ಏಜೆನ್ಸಿ, ಇಲಾಖೆ ಮುಖ್ಯಸ್ಥರು ವಿನಾಯಿತಿ ನೀಡಲಿದ್ದಾರೆ ಎಂದು ಟ್ರಂಪ್ ಕಾರ್ಯಾದೇಶದಲ್ಲಿ ತಿಳಿಸಿದ್ದಾರೆ.
ಟ್ರಂಪ್ ಆದೇಶದ ಪ್ರಮುಖ ಅಂಶಗಳು:
* ವಾಘ್ ಸ್ವಾತಂತ್ರ್ಯ ಮರುಸ್ಥಾಪಿಸುವುದು ಮತ್ತು ಫೆಡರಲ್ ಸೆನ್ಸಾರ್‌ಶಿಪ್ ಕೊನೆಗೊಳಿಸುವುದು
* ಗಲ್ಫ್ ಆಫ್ ಮೆಕ್ಸಿಕೊವನ್ನು ಗಲ್ಫ್ ಆಫ್ ಅಮೆರಿಕ ಎಂದು ಮರುನಾಮಕರಣ ಮಾಡುವುದು
* ಚೀನಾ ನಿರ್ವಹಣೆ ಮಾಡುತ್ತಿರುವ ಪನಾಮ ಕಾಲುವೆಯನ್ನು ಮರಳಿ ಪಡೆಯುವುದು
* ಅಮೆರಿಕದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಸ್ಥಗಿತಗೊಂಡಿದ್ದ ಟಿಕ್‌ಟಾಕ್ ಸೇವೆಯನ್ನು ಮುಂದಿನ 24 ಗಂಟೆಯಲ್ಲಿ ಪ್ರಾರಂಭಿಸುವುದು ಎಂಬಿತ್ಯಾದಿ ಅದೇಶಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದಲ್ಲಿರೋದು ಎರಡೇ ಲಿಂಗ:
ತೃತೀಯ ಲಿಂಗಿಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಟ್ರಂಪ್, ಇನ್ಮುಂದೆ ಅಮೆರಿಕದಲ್ಲಿ 2 ಲಿಂಗಗಳಷ್ಟೇ ಇರುತ್ತವೆ ಎಂದು ಘೋಷಿಸಿದ್ದಾರೆ. ಅಲ್ಲದೇ ಮಹಿಳೆಯರ ಕ್ರೀಡೆಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ನೀಡುವುದನ್ನು ನಿಷೇಧಿಸುತ್ತೇನೆ ಎಂಬುದಾಗಿಯೂ ಟ್ರಂಪ್ ಘೋಷಿಸಿದ್ದಾರೆ.