ವಾಷಿಂಗ್ಟನ್: ಚೀನಾ ಮೇಲೆ 145% ರಷ್ಟು ತೆರಿಗೆ ಹೇರಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್, ಚಿಪ್ ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಸುಂಕವನ್ನು ಕೈಬಿಟ್ಟಿದ್ದಾರೆ.
ಎಲೆಕ್ಟ್ರಾನಿಕ್ಸ್ ವಸ್ತುಗಳ ಸುಂಕವನ್ನು ಕೈಬಿಟ್ಟ ನಿರ್ಧಾರದಿಂದ ಚೀನಾದಲ್ಲಿ ಅತಿ ಹೆಚ್ಚು ಐಫೋನ್ (iPhone) ಉತ್ಪಾದನೆ ಮಾಡುತ್ತಿದ್ದ ಆ್ಯಪಲ್ ಕಂಪನಿ ಸೇರಿ ಹಲವು ಕಂಪನಿಗಳು ದರ ಏರಿಕೆಯ ಬರೆಯಿಂದ ಪಾರಾಗಿವೆ. ಇದನ್ನೂ ಓದಿ: ‘ಆಪಲ್’ ಮೇಲೆ ಟ್ರಂಪ್ ಟ್ಯಾರಿಫ್ ಎಫೆಕ್ಟ್; ಮುಂದಿನ ಐಫೋನ್ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?
ಚೀನಾ ಮೇಲೆ 145% ರಷ್ಟು ತೆರಿಗೆ ಘೋಷಣೆಯಿಂದ ಅಮೆರಿಕ ಮೂಲದ ಕಂಪನಿ ಆ್ಯಪಲ್‌ಗೆ ಸಮಸ್ಯೆಯಾಗಿತ್ತು. ಐಫೋನ್ ದರ 50%ರಷ್ಟು ಹೆಚ್ಚುವ ಸಾಧ್ಯತೆ ಇತ್ತು. ಈಗ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನ್ನು ಸುಂಕದ ಪಟ್ಟಿಯಿಂದ ತೆಗೆಯಲಾಗಿದೆ. ಇನ್ನೂ ಚೀನಾ ಮೇಲಿನ 145% ಸುಂಕ ಮಾತ್ರವಲ್ಲ, ಇತರ ದೇಶಗಳ ಮೇಲಿನ 10% ರಷ್ಟು ಮೂಲ ಸುಂಕ ದರವೂ ಇವುಗಳಿಗೆ ಅನ್ವಯ ಆಗುವುದಿಲ್ಲ ಎಂದು ಅಮೆರಿಕ ತಿಳಿಸಿದೆ. ಇದನ್ನೂ ಓದಿ: Donald Trump | ಭಾರತ ಸೇರಿದಂತೆ ಅಮೆರಿಕದಲ್ಲಿರುವ ವಿದೇಶಿಗರು 24×7 ವೀಸಾ ಹೊಂದಿರಬೇಕು