ವಾಷಿಂಗ್ಟನ್: ಅಮೆರಿಕಕ್ಕೆ (USA) ಆಮದು ಮಾಡಿಕೊಳ್ಳುವ ಎಲ್ಲಾ ವಿದೇಶಿ ಕಾರು ಹಾಗೂ ಇತರೇ ವಾಹನಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಣೆ ಮಾಡಿದ್ದಾರೆ. ಅಲ್ಲದೇ ಈ ಸುಂಕ ನಿರ್ಧಾರ ಶಾಶ್ವತವಾಗಿರಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಓವಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಕಾರು, ವಾಹನಗಳ ಮೇಲೆ 25% ಸುಂಕ (25 per cent Tariff) ವಿಧಿಸಲಾಗುತ್ತದೆ. ಅಮೆರಿಕದಲ್ಲೇ ತಯಾರು ಮಾಡಿದ್ರೆ ಅದಕ್ಕೆ ಯಾವುದೇ ಸುಂಕ ವಿಧಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕ ಆಮದು ಮೇಲಿನ ಸುಂಕ ಕಡಿತ – ಭಾರತದಿಂದ ಮೊದಲ ಹಂತದ ವ್ಯಾಪಾರ ಒಪ್ಪಂದ
ಏಪ್ರಿಲ್ 2ರಿಂದ ಸುಂಕ ನೀತಿ ಜಾರಿಯಾಗಲಿದ್ದು, ಏಪ್ರಿಲ್ 3ರಿಂದ ಸಂಗ್ರಹ ಪ್ರಾರಂಭವಾಗಲಿದೆ. ಅಮೆರಿಕದ ಈ ನೀತಿಯು ದೇಶಿಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಜೊತೆಗೆ ವಾಹನ ತಯಾರಕರ ಪೂರೈಕೆ ಸರಪಳಿ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಹೇಳಿದ್ದಾರೆ. ಆದ್ರೆ ಟ್ರಂಪ್ ಅವರ ಈ ನಿರ್ಧಾರದಿಂದ ಅಮೆರಿಕದ ಗ್ರಾಹಕರು ಹಣದುಬ್ಬರ ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದ 16 ವಯಸ್ಸಿನ ಟಿಕ್‌ಟಾಕ್ ಸ್ಟಾರ್ ಸಾವು
ಟ್ರಂಪ್ ನಿರ್ಧಾರದಲ್ಲಿ ಮಸ್ಕ್ ಪಾತ್ರ ಇದೆಯೇ?
ಟ್ರಂಪ್ ಅವರ ಈ ನಿರ್ಧಾರದ ಹಿಂದೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಪಾತ್ರ ಇದೆಯೇ ಎನ್ನುವ ವದಂತಿ ಕೇಳಿಬರುತ್ತಿದ್ದಂತೆ, ಆ ರೀತಿ ಯಾವುದೇ ಪಾತ್ರ ಇಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಸುಂಕದ ಬಗ್ಗೆ ಮಸ್ಕ್ ಯಾವುದೇ ಸಲಹೆ ನೀಡಿಲ್ಲ ಎಂದು ಹೇಳಿದ್ದಾರೆ.
ಈ ನೀತಿಯನ್ನು ಪ್ರಮುಖ ವಾಹನ ತಯಾರಕರೊಂದಿಗೆ ಚರ್ಚಿಸಿದ್ದೇನೆ ಮತ್ತು ಈ ಸುಂಕಗಳು ಒಟ್ಟಾರೆಯಾಗಿ ಸಮತೋಲಿತವಾಗಿರುತ್ತವೆ. ಟೆಸ್ಲಾಗೂ ಇದು ಪ್ರಯೋಜನಕಾರಿಯಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ಭಾರತಕ್ಕಿಂತಲೂ ನಾವು ಹಿಂದಿದ್ದೇವೆ – ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾದ ಟ್ರಂಪ್