ಡ್ಯಾನಂಗ್: 100 ಕೋಟಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾ ಪ್ರವಾಸ ಮುಕ್ತಾಯಗೊಳಿಸಿ ವಿಯೆಟ್ನಾಂ ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ(ಅಪೆಕ್) ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಟ್ರಂಪ್ ಮೋದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
70 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಭಾರತ ಆಚರಿಸುತ್ತಿದೆ. ನೂರು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ದೇಶದ ಪ್ರಜೆಗಳನ್ನು ಒಗ್ಗೂಡಿಸಿ ಯಶಸ್ವಿಯಾಗಿ ಮೋದಿ ಮುನ್ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
Advertisement
ಭಾರತ ಮುಕ್ತ ಆರ್ಥಿಕತೆಗೆ ತೆರೆದ ಬಳಿಕ ಭಾರೀ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದೆ. ಮೋದಿ ಅವರು ಎಲ್ಲ ಜನರನ್ನು ಒಗ್ಗೂಡಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ ಎಂದು ಟ್ರಂಪ್ ಶ್ಲಾಘಿಸಿದರು. ಜಪಾನ್, ರಷ್ಯಾ, ಚೀನಾ, ದಕ್ಷಿಣ ಕೊರಿಯಾ ನಾಯಕರು ಅಪೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
Advertisement
ಪ್ರಧಾನಿ ಮೋದಿ ಜೂನ್ ತಿಂಗಳಿನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಶ್ವೇತ ಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು.
Advertisement
ಇದನ್ನೂ ಓದಿ: ಶ್ವೇತಭವನದಲ್ಲಿ ಪ್ರಧಾನಿಯನ್ನು ಮುಜುಗರದಿಂದ ಪಾರು ಮಾಡಿದ್ರು ಅಜಿತ್ ದೋವಲ್!
US President @realDonaldTrump talks glowingly about Indian democracy and its growing economy, while addressing APEC CEO summit in Vietnam pic.twitter.com/eWByuNwcLI
— The Times Of India (@timesofindia) November 10, 2017