ವಾಷಿಂಗ್ಟನ್ ಡಿಸಿ: ಇಂದು ಶ್ವೇತಭವನದಲ್ಲಿ ಕರೆದಿದ್ದ ಗವರ್ನರ್ ಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಒಬ್ಬ ಸುಂದರ, ಅದ್ಭುತ ವ್ಯಕ್ತಿಯಾಗಿದ್ದರೂ ಅಮೆರಿಕ ದೇಶಕ್ಕೆ ಏನೂ ಲಾಭವಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಅಮೆರಿಕನ್ ಮೋಟಾರ್ ಸೈಕಲ್‍ಗಳು, ಅದರಲ್ಲಿಯೂ ಹಾರ್ಲೆ ಡೇವಿಡ್‍ಸನ್ ಮಾದರಿಯ ವಾಹನಗಳ ಮೇಲೆ ಭಾರತ ಸರ್ಕಾರ ಶೇ.100ರಷ್ಟು ಆಮದು ತೆರಿಗೆಯನ್ನು ವಿಧಿಸುತ್ತಿತ್ತು. ಹೀಗಾಗಿ ಅಮೆರಿಕ ಸರ್ಕಾರ ಆಮದು ತೆರಿಗೆಯನ್ನು ಕಡಿತಗೊಳಿಸಬೇಕೆಂದು ಒತ್ತಡ ಹಾಕಿತ್ತು.
Advertisement
Advertisement
ನಾನು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದಾಗ 75%ರಷ್ಟು ಆಮದು ತೆರಿಗೆ ತಗ್ಗಿಸಿರುವುದಾಗಿ ಅಂತ ತಿಳಿಸಿದ್ರು. ಆದರೆ ಮೋದಿಯವರು ಮಾತ್ರ 50% ರಷ್ಟು ತಗ್ಗಿಸುವ ಮೂಲಕ ಅಮೆರಿಕಾಗೆ ದೊಡ್ಡ ಕೆಲಸ ಮಾಡಿದ್ದೇವೆ ಎಂಬ ಹೆಮ್ಮೆಯಲ್ಲಿದ್ದಾರೆ. ಇದರಿಂದ ಅಮೆರಿಕಾಗೆ ಯಾವುದೇ ರೀತಿಯಲ್ಲಿ ಲಾಭವಿಲ್ಲ ಎಂದು ಹೇಳಿದ್ದಾರೆ.
Advertisement
ಈ ಮೊದಲು ಭಾರತ ಶೇ.75 ರಷ್ಟು ತೆರಿಗೆಯನ್ನು ಕಡಿತಗೊಳಿಸಲಾಗುವುದು ಎಂಬ ಭರವಸೆಯನ್ನು ನೀಡಿತ್ತು. ಆದ್ರೆ ಶೇ.25ರಷ್ಟು ತೆರಿಗೆ ಕಡಿತಗೊಳಿಸಿದ್ದು, ನಿರಾಶೆಯನ್ನು ಉಂಟು ಮಾಡಿದೆ ಅಂತಾ ಟ್ರಂಪ್ ಹೇಳಿದ್ದಾರೆ. ಅಮೆರಿಕನ್ ವಸ್ತುಗಳ ಮೇಲಿನ ಆಮದು ತೆರಿಗೆ ಕಡಿತದ ಕುರಿತಾಗಿ ಎರಡು ವಾರಗಳ ಅವಧಿಯಲ್ಲಿ ಟ್ರಂಪ್ ಭಾರತದ ವಿರುದ್ಧ ಎರಡು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.