ಚಿಕ್ಕಬಳ್ಳಾಪುರ: ನಿಜವಾದ ಬ್ರಾಹ್ಮಣರು-ಸ್ವಾಮೀಜಿಗಳು ಆಗಿದ್ರೆ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು (Narendra Modi) ಗರ್ಭಗುಡಿಗೆ ಬಿಡಬಾರದಿತ್ತು ಅಂತ ಮಾಜಿ ಸಿಎಂ ವೀರಪ್ಪಮೊಯ್ಲಿ (Veerappa Moily) ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ (Congress) ವತಿಯಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಮಮಂದಿರ ಅಪೂರ್ಣ ಮಂದಿರ. ಕೇವಲ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮಾಡಿದ್ರೆ ಸಾಲದು. ಅಲ್ಲಿ ರಾಮ ಲಕ್ಷಣ, ಸೀತಾ ಹಾಗೂ ಆಂಜನೇಯನ ವಿಗ್ರಹಗಳು ಇರಬೇಕು ಆಗಲೇ ರಾಮಮಂದಿರ ಪೂರ್ಣ ಆಗೋದು ಎಂದರು.
- Advertisement
ಗುಜರಾತ್‍ನ (Gujrat) ಹತ್ಯಾಕಾಂಡದ ವೇಳೆ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ರಾಜಧರ್ಮ, ಕಾನೂನು ಪರಿಪಾಲನೆ ಮಾಡಲಿಲ್ಲ. ಅಂತಹ ನರೇಂದ್ರ ಮೋದಿಯವರಿಂದ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿಸಿದ್ದು ಎಷ್ಟು ಸರಿ..? ಅವರಿಂದ ದೇವಾಲಯಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ..? ನರೇಂದ್ರ ಮೋದಿ ಗರ್ಭಗುಡಿಗೆ ಪ್ರವೇಶ ಮಾಡಿದ್ದೇ ತಪ್ಪು, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಸಹ ತಪ್ಪು, ನಿಜವಾದ ಸ್ವಾಮೀಜಿಗಳು, ಬ್ರಾಹ್ಮಣರು ಆಗಿದ್ರೆ ನರೇಂದ್ರ ಮೋದಿಯನ್ನ ಗರ್ಭಗುಡಿ ಒಳಗೆ ಬಿಡಬಾರದಿತ್ತು ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!