ಲಕ್ನೋ: ಟ್ರಕ್ (Truck) ಒಂದು ಸ್ಕೂಟರ್‌ಗೆ (Scooter) ಡಿಕ್ಕಿ ಹೊಡೆದು 6ರ ಬಾಲಕನನ್ನು (Boy) 2 ಕಿ.ಮೀ ವರೆಗೆ ಎಳೆದುಕೊಂಡು ಹೋಗಿರುವ ಭೀಕರ ಘಟನೆ ಉತ್ತರ ಪ್ರದೇಶದ (Uttar Pradesh) ಮಹೋಬದಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕ, ಆತನ ಅಜ್ಜ (Grandfather) ಹಾಗೂ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ, ಉದಿತ್ ನಾರಾಯಣ್ ಚಾನ್ಸೋರಿಯಾ (67) ಹಾಗೂ ಅವರ ಮೊಮ್ಮಗ ಸಾತ್ವಿಕ್ (6) ಸ್ಕೂಟರ್‌ನಲ್ಲಿ ಮಾರುಕಟ್ಟೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಉದಿತ್ ಸ್ಥಳದಲ್ಲೇ ಮೃತಪಟ್ಟರೆ, ಸಾತ್ವಿಕ್ ಸ್ಕೂಟರ್ ಸಮೇತವಾಗಿ ಟ್ರಕ್‌ನ ಅಡಿಯಲ್ಲಿ ಸಿಲುಕಿ 2 ಕಿ.ಮೀ ವರೆಗೆ ಎಳೆಯಲ್ಪಟ್ಟಿದ್ದಾನೆ. ಇದರಿಂದ ಬಾಲಕ ಸಾತ್ವಿಕ್ ಕೂಡಾ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಆಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್- ಯುವ ಕ್ರಿಕೆಟಿಗ ದುರ್ಮರಣ
ಘಟನೆ ಕಾನ್ಪುರ-ಸಾಗರ್ ಹೆದ್ದಾರಿ ಎನ್‌ಹೆಚ್86 ರಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವೀಡಿಯೊದಲ್ಲಿ, ಟ್ರಕ್ ಬಳಿ ಹಲವರು ಬೈಕ್‌ಗಳಲ್ಲಿ ಸುತ್ತುವರಿದು ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಕೊನೆಗೆ ಸ್ಥಳೀಯರು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇರಿಸಿ ಟ್ರಕ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸ್ಥಳೀಯರು ಚಾಲಕನನ್ನು ಥಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ, ಟ್ರಕ್ ಚಾಲಕ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಉಗ್ರರ ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ್ ಸಾವು