ಅಹಮದಾಬಾದ್: ಇತ್ತೀಚೆಗೆ ಹಲವು ಮಂದಿ ಯುವಕರು ಹೃದಯಾಘಾತ (Heart Attack) ಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಕಬಡ್ಡಿ ಹಾಗೂ ಕ್ರಿಕೆಟ್ ಆಡುವಾಗ ಯುವಕರು ಹಾರ್ಟ್ ಅಟ್ಯಾಕ್‍ಗೆ ತುತ್ತಾಗುತ್ತಿರುವುದು ವಿಶೇಷ. ಇದೀಗ ಇಂಥದ್ದೇ ಘಟನೆಯೊಂದು ಅಹಮದಾಬಾದ್‍ನಲ್ಲಿ ನಡೆದಿದೆ.
Advertisement
ಮೃತ ದುರ್ದೈವಿಯನ್ನು ವಸಂತ್ ರಾಥೋಡ್ (34) ಎಂದು ಗುರುತಿಸಲಾಗಿದೆ. ಇವರು ರಾಜ್ಯ ಸರಕು ಹಾಗೂ ಸೇವಾ ತೆರಿಗೆ ಇಲಾಖೆಯಲ್ಲಿ ಹಿರಿಯ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಉಗ್ರರ ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ್ ಸಾವು
Advertisement
Advertisement
ಎಂದಿನಂತೆ ವಸಂತ್ ಕ್ರಿಕೆಟ್ (Cricket) ಆಡುತ್ತಿದ್ದರು. ಅಂತೆಯೇ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆಯಾಸ ಉಂಟಾಗಿ ಅಲ್ಲಿಯೇ ಕುಳಿತರು. ಅಲ್ಲದೆ ಅಲ್ಲಿಯೇ ಕುಸಿದರು. ತಕ್ಷಣ ಸಹಪಾಠಿಗಳು ನೀರು ಕುಡಿಸಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ವಸಂತ್ ಅಲ್ಲಿಯೇ ಕೊನೆಯುಸಿರೆಳೆದರು.