ಗಾಂಧಿನಗರ: ಮದ್ಯ ತುಂಬಿದ್ದ ಟ್ರಕ್ ವೊಂದು ಪಲ್ಟಿಯಾದ ಪರಿಣಾಮ ಮದ್ಯ ತುಂಬಿದ್ದ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲೆಲ್ಲಾ ಮದ್ಯ ಹರಿದಾಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಈ ಘಟನೆ ಭಚೌ ಜಿಲ್ಲೆಯ ಕಛ್ ನಲ್ಲಿ ಸಂಭವಿಸಿದೆ. ಟ್ರಕ್ ಮದ್ಯ ತುಂಬಿಕೊಂಡು ಭಚೌ ಹೆದ್ದಾರಿಯ ಮೂಲಕ ವೇಗವಾಗಿ ಹೋಗುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ಆ ವಾಹನವನ್ನು ಚೇಸ್ ಮಾಡಿದ್ದಾರೆ.
Advertisement
ಟ್ರಕ್ ಚಾಲಕ ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಹೆದ್ದಾರಿ ಬಿಟ್ಟು ಸರ್ವೀಸ್ ರಸ್ತೆಯಲ್ಲಿ ಹೋಗಿದ್ದಾನೆ. ಪೊಲೀಸರು ಬಿಡದೆ ಟ್ರಕ್ ನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಕಛ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿ ಹೊಡೆದಿದೆ. ಟ್ರಕ್ ಪಲ್ಟಿ ಹೊಡೆದ ಪರಿಣಾಮ ಟ್ರಕ್ ನಲ್ಲಿ ತುಂಬಿದ್ದ ಮದ್ಯ ಬಾಕ್ಸ್ ಗಳು ರಸ್ತೆಯಲ್ಲೆಲ್ಲಾ ಬಿದ್ದಿದೆ. ಇದರಿಂದ ಮದ್ಯ ರಸ್ತೆಯಲ್ಲಿ ಹರಿದಾಡಿದೆ. ಟ್ರಕ್ ಪಲ್ಟಿ ಹೊಡೆದ ತಕ್ಷಣ ಪೊಲೀಸರನ್ನು ನೋಡಿ ಗಾಬರಿಯಿಂದ ಚಾಲಕ ಟ್ರಕ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
Advertisement
ಸದ್ಯಕ್ಕೆ ಪೊಲೀಸರು ಟ್ರಕ್ ವಶಪಡೆದುಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಟ್ರಕ್ ಮಾಲೀಕ ಯಾರು, ಈ ಮದ್ಯ ಎಲ್ಲಿಂದ ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.
Advertisement
Gujarat: Truck carrying liquor cartons overturned in Kutch district's Bhachau pic.twitter.com/jkj9S5zksn
— ANI (@ANI) May 25, 2018