ಟ್ರಕ್, ಟ್ರ್ಯಾಕ್ಟರ್ ಡಿಕ್ಕಿ- ಕೆಲಸಕ್ಕೆ ಹೊರಟಿದ್ದ ನಾಲ್ವರು ಸಾವು

Public TV
1 Min Read
maharashtras solapur accident

ಮುಂಬೈ: ಟ್ರಕ್, ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಕೆಲಸಕ್ಕೆ ತೆರಳುತ್ತಿದ್ದ ನಾಲ್ವರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ತಡರಾತ್ರಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಗೊಂಡವರೆಲ್ಲರೂ ತುಳಜಾಪುರ ತಾಲೂಕಿನ ಕಡಮವಾಡಿ ನಿವಾಸಿಗಳು.  ಇದನ್ನೂ ಓದಿ: ಆಲೂಗಡ್ಡೆ, ಟೊಮೆಟೊ ಬೆಲೆ ಪರಿಶೀಲಿಸಲು ನಾನು ರಾಜಕೀಯ ಸೇರಿಲ್ಲ – ಪಾಕ್ ಪ್ರಧಾನಿ

ROAD

ನಡೆದಿದ್ದೇನು?: ಪಂಡರಾಪುರಕ್ಕೆ  ಟ್ರ್ಯಾಕ್ಟರ್‌ನಲ್ಲಿ ಹೊರಟಿದ್ದರು, ಸೊಲ್ಲಾಪುರದಿಂದ ಮೊಹೋಲ್ ಮಾರ್ಗವಾಗಿ ಪಂಡರಾಪುರಕ್ಕೆ ತೆರಳುತ್ತಿದ್ದಾಗ ಕೊಂಡಿ- ಕೇಗಾಂವ್ ನಡುವೆ ಇದ್ದಾಗ ಹಿಂಬದಿಯಿಂದ ಬಂದ ಟ್ರಕ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್‌ನಲ್ಲಿದ್ದವರು ಮೇಲಕ್ಕೆ ಹಾರಿ ರಸ್ತೆಯಲ್ಲಿ ಚೆಲ್ಲಾ, ಪಿಲ್ಲಿಯಾಗಿ ಬಿದ್ದಿದ್ದಾರೆ. ಈ ವೇಳೆ ನಾಲ್ವರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳಲ್ಲಿ ಆರು ಜನ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಕೆನಡಾದ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಸಾವು

ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *