ಹಾಸನ: ಎಲೆಕ್ಷನ್ ಶುರುವಾದಾಗಿನಿಂದ ಗೌಡರ ಫ್ಯಾಮಿಲಿಗೆ ಟೆನ್ಶನ್ ಕಡಿಮೆಯಾದಂತೆ ಕಾಣಿಸ್ತಿಲ್ಲ. ಇಷ್ಟು ದಿನ ಮಂಡ್ಯ ಟೆನ್ಶನ್‍ನಲ್ಲಿ ಸಿಎಂ ಕುಮಾರಸ್ವಾಮಿ ದೇವಸ್ಥಾನವೆಲ್ಲಾ ಸುತ್ತಿದ್ದಾರೆ. ಇದೀಗ ಸಚಿವ ಹೆಚ್.ಡಿ.ರೇವಣ್ಣ ಸಹ ಫುಲ್ ಟೆನ್ಶನ್ ಆಗಿದ್ದಾರೆ.
ಮಂಡ್ಯ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡು ರಾಜ್ಯದಲ್ಲಿರೋ ದೇವಸ್ಥಾನಗಳಲ್ಲದೆ ಹೊರ ರಾಜ್ಯದ ದೇವಸ್ಥಾನವನ್ನು ಸುತ್ತಿದ್ದ ದೇವೇಗೌಡರ ಕುಟುಂಬಕ್ಕೆ ಈಗ ಹಾಸನದ ಟೆನ್ಶನ್ ಆರಂಭವಾಗಿದೆ. ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿದ ಆರೋಪದ ಮೇರೆಗೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಆರ್.ಪಿ ಆಕ್ಟ್ 125ಎ ಪ್ರಕಾರ ಕ್ರಮಕೈಗೊಳ್ಳುವಂತೆ ಮುಖ್ಯ ಚುನಾವಣಾ ಅಧಿಕಾರಿ ಇದೀಗ ಹಾಸನದ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
Advertisement
Advertisement
ಪ್ರಜ್ವಲ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿರೋ ದೂರುದಾರ ದೇವರಾಜೇಗೌಡ, ಪ್ರಜ್ವಲ್ ವಿರುದ್ಧ ಕ್ರಮಕೈಗೊಳ್ಳುವವರೆಗು ಮತ ಎಣಿಕೆಯನ್ನೇ ಮಾಡದಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅಫಿಡವಿಟ್ ಏನೆಲ್ಲ ತಪ್ಪಾಗಿದೆ ಎಂಬುವುದು ಈ ಕೆಳಗಿನಂತಿದೆ
Advertisement
1. ಪ್ರಜ್ವಲ್ ರೇವಣ್ಣ ನಿಯಮದ ಪ್ರಕಾರ ಕನಿಷ್ಠ 5 ವರ್ಷ ಐಟಿ ರಿರ್ಟನ್ ಫೈಲ್ ಮಾಡಿಲ್ಲ.
2. ಚೆನ್ನಾಂಬಿಕ ಕನ್ವೆಂಷನ್ ಹಾಲ್‍ಗೆ ಸಾಲ ಪಡೆದುದ್ದಾಗಿ ಹೇಳಿದ್ದು. ಆದರೆ ಐಟಿ ಫೈಲ್ ಮಾಡದೇ ಸಾಲ ಸಿಕ್ಕಿದ್ದು ಹೇಗೆ?
3. ಚೆನ್ನಾಂಬಿಕ ಕನ್ವೆಂಷನ್ ಹಾಲ್‍ನ ಇಂದಿನ ಮಾರುಕಟ್ಟೆ ಬೆಲೆ ಘೋಷಣೆ ಮಾಡಿಲ್ಲ.
4. ಸಿಎನ್‍ಡಿ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಟ್‍ನಲ್ಲಿ ಹೂಡಿಕೆ ತೋರಿಸಿದ್ದು, ಲಾಭ-ಬಡ್ಡಿ ಲೆಕ್ಕ ತೋರಿಸಿಲ್ಲ.
Advertisement
5. ತಂದೆಯಿಂದ ಬಂದ ಆಸ್ತಿಯ ಮಾರುಕಟ್ಟೆ ಮೌಲ್ಯ ಪಡೆಯಬೇಕು.
6. ಪ್ರಜ್ವಲ್ ಅನೇಕರಿಗೆ ಸಾಲ ನೀಡಿದ್ದು, ಅದರ ಬಗ್ಗೆ ಘೋಷಣೆ ಮಾಡಿಲ್ಲ.
7. ಪ್ರಜ್ವಲ್‍ಗೆ ದೇವೇಗೌಡರು 23 ಲಕ್ಷ ಸಾಲ ನೀಡಿದ್ದಾಗಿ ತಮ್ಮ ನಾಮಿನೇಷನ್‍ನಲ್ಲಿ ಹೇಳಿದ್ದಾರೆ. ಆ ಬಗ್ಗೆ ಪ್ರಜ್ವಲ್ ಉಮೇದುವಾರಿಕೆಯಲ್ಲಿ ಉಲ್ಲೇಖಿಸಿಲ್ಲ.
ಒಟ್ಟಿನಲ್ಲಿ ಸದಾ ಒಂದಲ್ಲ ಒಂದು ಟೆನ್ಶನ್‍ನಲ್ಲಿರೋ ಸಿಎಂ ಜೊತೆಗೆ ಇದೀಗ ರೇವಣ್ಣಗೆ ಹಾಸನದ ಟೆನ್ಶನ್ ಶುರುವಾಗಿದೆ. ಒಂದು ವೇಳೆ ಕ್ರಮ ಕೈಗೊಂಡ್ರೆ ಫಲಿತಾಂಶ ಘೋಷಣೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತದೆ. ಒಂದು ವೇಳೆ ಆರೋಪ ಸಾಬೀತಾದ್ರೆ 125ಎ ಆರ್‍ಪಿ ಆಕ್ಟ್ ಪ್ರಕಾರ 6 ತಿಂಗಳು ಶಿಕ್ಷೆ ಮತ್ತು ದಂಡ ಕೂಡ ವಿಧಿಸಬಹುದು.