ಹೈದರಾಬಾದ್: ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ “ಹಮರ ಪಾಕಿಸ್ತಾನ್ ಜಿಂದಾಬಾದ್” ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಭಾರತೀಯ ನೆಟ್ಟಿಗರು ಶೋಯಿಬ್ ರನ್ನು ಟ್ರೋಲ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಅದರಲ್ಲೂ ಹೈದರಾಬಾದ್ ಸ್ಥಳೀಯರು ಶೋಯಿಬ್ ಮಲಿಕ್‍ಗೆ ಎಚ್ಚರಿಕೆ ನೀಡಿದ್ದು, ಹೈದರಾಬಾದ್ ನಗರಕ್ಕೆ ಕಾಲಿಟ್ಟರೆ ಎಚ್ಚರಿಕೆಯಿಂದಿರಿ ಎಂದಿದ್ದಾರೆ. ಕೆಲವರು ಈ ಟ್ವೀಟ್‍ಗೆ ಪತ್ನಿ ಸಾನಿಯಾ ಮಿರ್ಜಾ ಉತ್ತರ ನೀಡಬೇಕು ಎಂದು ಅಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ, ಶಾಸಕ ರಾಜಾ ಸಿಂಗ್ ಅಕ್ರೋಶ ವ್ಯಕ್ತಪಡಿಸಿ ತೆಲಂಗಾಣ ರಾಯಭಾರಿ ಸ್ಥಾನದಿಂದ ಸಾನಿಯಾ ಮಿರ್ಜಾರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement
Advertisement
ಪಾಕಿಸ್ತಾನದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿರುವ ವೇಳೆ, ನಮ್ಮ ರಾಜ್ಯ ಬ್ರಾಂಡ್ ಅಂಬಾಸಿಡರ್ ಪತಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸಾನಿಯಾ ಮಿರ್ಜಾ ಬದಲಾಗಿ ತೆಲಂಗಾಣದ ರಾಜ್ಯದ ಸ್ಟಾರ್ ಕ್ರೀಡಾಪಟುಗಳಾದ ಪಿವಿ ಸಿಂಧು, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಥವಾ ಸೈನಾ ನೆಹ್ವಾಲ್‍ರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿ ಎಂದು ಸಲಹೆ ನೀಡಿದ್ದಾರೆ.
Advertisement
ಮಲಿಕ್ ಟ್ವೀಟ್‍ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಲವರು, ಮಲಿಕ್‍ಗೆ ಭಾರತಕ್ಕೆ ಬರಲು ಸಾಧ್ಯವಾಗದಂತೆ ಮಾಡಿ ಎಂದು ಸಿಎಂ ಕೆಸಿಆರ್ ಅವರಿಗೆ ಮನವಿ ಮಾಡಿದ್ದಾರೆ.
Advertisement
ಫೆ.14 ರಂದು ನಡೆದ ಪುಲ್ವಾಮಾ ದಾಳಿಯ ವೇಳೆ ಉಗ್ರರ ದಾಳಿಯನ್ನು ಖಂಡಿಸಿದ್ದ ಸಾನಿಯಾ ಮಿರ್ಜಾ, ಸಿಆರ್‍ಪಿಎಫ್ ಯೋಧರಿಗೆ ತಮ್ಮ ಬೆಂಬಲ ಇರುವುದಾಗಿ ತಿಳಿಸಿದ್ದರು. ಅಲ್ಲದೇ ತಮಗೆ ಸಾರ್ವಜನಿಕರವಾಗಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿಲು ಇಷ್ಟವಿಲ್ಲ ಎಂದಿದ್ದರು. ಕೆಲವರ ಬಾಯಿ ಮುಚ್ಚಿಸಲು ಈ ಟ್ವೀಟ್ ಮಾಡಿದ್ದಾಗಿ ಆರೋಪಿಸಿದ್ದರು. ಅಲ್ಲದೇ ನಾನು ದೇಶದ ಆಟ ಆಡುವ ಮೂಲಕ ನನ್ನ ದೇಶ ಭಕ್ತಿಯನ್ನು ನಿರೂಪಿಸುತ್ತಿದ್ದೇನೆ. ಭಾರತಕ್ಕೆ ಫೆ.14 ಕಪ್ಪು ದಿನವಾಗಿದ್ದು, ಮತ್ತೆ ಇಂತಹ ಘಟನೆ ನಡೆಯಬಾರದು. ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ನನ್ನ ವಿರುದ್ಧ ದ್ವೇಷ ಸಾಧಿಸಿ, ನನ್ನನ್ನು ಟ್ರೋಲ್ ಮಾಡಲು ಮಾತ್ರ ನಿಮ್ಮಿಂದ ಸಾಧ್ಯ. ಆದರೆ ಈ ಜಗತ್ತಿನಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv