ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಯಾವಾಗಲೂ ಜನರ ಸಂಪರ್ಕದಲ್ಲಿರುತ್ತಾರೆ. ಯಾರದರೂ ತೊಂದರೆಯಲ್ಲಿದ್ದರೆ, ತಕ್ಷಣವೇ ಸಹಕಾರ ನೀಡುವ ಕಾರ್ಯವನ್ನು ಮಾಡುತ್ತಾರೆ. ಅಲ್ಲದೇ ತಮ್ಮ ವಿರುದ್ಧ ಕಮೆಂಟ್ ಮಾಡುವವರಿಗೂ ಖಡಕ್ ತಿರುಗೇಟು ನೀಡುತ್ತಾರೆ.
ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ರಾಮ್ ಗರ್ಗ್ ನಿಧನರಾದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಅವರು ಸಂತಾಪ ಸೂಚಿಸಿದ್ದರು. ಆದರೆ ಇವರ ಟ್ವೀಟ್ ಗೆ ಇರ್ಫಾನ್ ಖಾನ್ ಎಂಬಾತ ಪ್ರತಿಕ್ರಿಯೆ ನೀಡಿ ಸುಷ್ಮಾ ಸ್ವರಾಜ್ ರನ್ನ ಟ್ರೋಲ್ ಮಾಡಲು ಯತ್ನಿಸಿದ್ದ.
श्री मांगे राम गर्ग जी के अकस्मात निधन का समाचार सुन कर बहुत दुःख हुआ। वह भारतीय जनता पार्टी के बहुत निष्ठावान और समर्पित कार्यकर्ता थे। उन्होंने अनेक पदों पर रह कर अपने दायित्व को बहुत ज़िम्मेदारी और कर्मठता से निभाया। उनके निधन से पार्टी को अपूरणीय क्षति पहुंची है।
— Sushma Swaraj (@SushmaSwaraj) July 21, 2019
ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಾವನ್ನು ಪ್ರಸ್ತಾಪ ಮಾಡಿದ್ದ ಆತ, ಶೀಲಾ ದೀಕ್ಷಿತ್ ರಂತೆಯೇ ನಿಮ್ಮನ್ನು ಕೂಡ ದೇಶದ್ಯಾಂತಹ ನೆನಪಿಸಿಕೊಳ್ಳುತ್ತಾರೆ ಅಮ್ಮಾ ಎಂದು ಕಮೆಂಟ್ ಮಾಡಿದ್ದ. ಈತನ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ನನ್ನ ಕುರಿತು ಇಂತಹ ಅತ್ಯುನ್ನತ ಆಲೋಚನೆ ಮಾಡಿದಕ್ಕೆ ಧನ್ಯವಾದ ಎಂದು ನಯವಾಗಿ ಟಾಂಗ್ ನೀಡಿದ್ದಾರೆ.
ಈ ಹಿಂದೆಯೂ ತಮ್ಮನ್ನು ಟ್ರೋಲ್ ಮಾಡಲು ಯತ್ನಿಸಿದ್ದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಅವರು ಖಡಕ್ ಆಗಿಯೇ ಉತ್ತರಿಸಿದ್ದರು. ಅಂತರಧರ್ಮಿಯ ವಿವಾಹವಾಗಿದ್ದ ದಂಪತಿಗೆ ಪಾಸ್‍ಪೋರ್ಟ್ ನೀಡುವ ವಿಚಾರದಲ್ಲಿ ಟ್ರೋಲ್ ಮಾಡಿದ್ದ ವ್ಯಕ್ತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ ತಮ್ಮನ್ನು ಬ್ಲಾಕ್ ಮಾಡಿ ಎಂದಿದ್ದರು.
Is bhawana ke liye apko mera agrim dhanyawad.
I thank you in anticipation for this kind thought. https://t.co/pbuW6R6gcE
— Sushma Swaraj (@SushmaSwaraj) July 21, 2019