ಪ್ರಭಾಸ್, ಕೃತಿ ಸನೋನ್ (Kriti Sanon) ನಟನೆಯ ‘ಆದಿಪುರುಷ್’ ಸಿನಿಮಾ ಸದಾ ಒಂದಲ್ಲಾ ಒಂದು ಟೀಕೆಯ ಮೂಲಕ ಸದ್ದು ಮಾಡುತ್ತಲೇ ಇದೆ. ಪೋಸ್ಟರ್ ಅಥವಾ ಟ್ರೈಲರ್‌ನಲ್ಲಿ ಏನಾದರೂ ಎಡವಟ್ಟು ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಆದಿಪುರುಷ್ ಟೀಂ ಗುರಿಯಾಗುತ್ತಲೇ ಬಂದಿದೆ. ಪ್ರಸ್ತುತ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಚಿತ್ರತಂಡ ಮತ್ತೆ ಎಡವಟ್ಟ ಮಾಡಕೊಂಡಿದ್ದಾರೆ. ಇದನ್ನೂ ಓದಿ:ನಟನೆಗೆ ಗುಡ್ ಬೈ ಹೇಳ್ತಾರಾ ರಜನಿಕಾಂತ್?
‘ಬಾಹುಬಲಿ’ (Bahubali) ಪ್ರಭಾಸ್ ಈ ಚಿತ್ರದಲ್ಲಿ ಇರುವ ಕಾರಣ, ಆದಿಪುರುಷ್ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನ ಅಭಿಮಾನಿಗಳು ಹೊಂದಿದ್ದಾರೆ. ಓಂ ರಾವತ್ ನಿರ್ದೇಶನದಲ್ಲಿ ‘ಆದಿಪುರುಷ್’ ಚಿತ್ರ ಮೂಡಿ ಬಂದಿದೆ. 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರ ಮೂಡಿ ಬಂದಿದೆ. ರಾಮನಾಗಿ ಪ್ರಭಾಸ್ (Prabhas), ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ (Saif Ali Khan) ನಟಿಸಿದ್ದಾರೆ. ಜೂನ್ 16ಕ್ಕೆ ಚಿತ್ರ ತೆರೆಗೆ ಬರಲಿದೆ. ಶ್ರೀ ರಾಮನ ಹಾಡು ಇದೇ ಮೇ 20ಕ್ಕೆ ರಿಲೀಸ್ ಆಗಲಿದೆ.
‘ಆದಿಪುರುಷ್’ (Adipurush) ಸಿನಿಮಾ ರಿಲೀಸ್‌ಗೆ ಇನ್ನೊಂದು ತಿಂಗಳು ಬಾಕಿಯಿದೆ ಎಂದು ಹೇಳಿ ಚಿತ್ರತಂಡ ಹೊಸ ಪೋಸ್ಟರ್ ಹಂಚಿಕೊಂಡಿದೆ. ಆಗಸದಲ್ಲಿ ಹಾರುವ ಸಾಗುತ್ತಿರುವ ಹನುಮಂತನ ಬೆನ್ನೇರಿ ರಾವಣನ ಸೈನ್ಯದ ವಿರುದ್ಧ ಶ್ರೀರಾಮ ಬಾಣ ಪ್ರಯೋಗ ಮಾಡುತ್ತಿರುವ ದೃಶ್ಯ ಇದು. ಪೋಸ್ಟರ್ ಮೊದಲ ನೋಟದಲ್ಲೇ ಗಮನ ಸೆಳೆಯುತ್ತಿದೆ ಟ್ರೈಲರ್‌ನಲ್ಲಿ ಈ ಝಲಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಈಗ ಪೋಸ್ಟರ್ ಕೂಡ ಸಖತ್ ಕಿಕ್ ಕೊಡ್ತಿದೆ. ಆದರೆ ಪೋಸ್ಟರ್‌ನಲ್ಲಿ ಕಟ್ಟಡ ಇರುವುದು ನೋಡಿ ಕೆಲವರು ಅಚ್ಚರಿಗೊಂಡಿದ್ದಾರೆ.
View this post on Instagram
ಸಾಮಾನ್ಯವಾಗಿ ಗ್ರಾಫಿಕ್ ಡಿಸೈನರ್‌ಗಳು ಹೊಸ ಪೋಸ್ಟರ್ ಡಿಸೈನ್ ಮಾಡುವಾಗ ರೆಫರೆನ್ಸ್ಗೆ ಬೇರೆ ಯಾವುದಾದರೂ ಪೋಸ್ಟರ್ ಬಳಸುತ್ತಾರೆ. ಅದೇ ರೀತಿ ‘ಆದಿಪರುಷ್’ ಚಿತ್ರದ ಈ ಹೊಸ ಪೋಸ್ಟರ್‌ಗೂ ಯಾವುದೋ ಹಾಲಿವುಡ್ ಪೋಸ್ಟರ್ ತೆಗೆದುಕೊಂಡಿದ್ದಾರೆ. ಆದರೆ ಎಡಿಟ್ ಮಾಡುವ ವೇಳೆ ಒರಿಜಿನಲ್ ಪೋಸ್ಟರ್‌ನಲ್ಲಿದ್ದ ಕಟ್ಟಡವನ್ನು ತೆಗೆಯಲು ಮರೆತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಇಷ್ಟು ದೊಡ್ಡ ಸಿನಿಮಾ ಪೋಸ್ಟರ್ ರಿಲೀಸ್ ಮಾಡುವಾಗ ಇದನ್ನೆಲ್ಲಾ ನೋಡಿಕೊಳ್ಳಬೇಕು. ರಾಮಾಯಣ ಕಾಲದಲ್ಲಿ ಆಧುನಿಕ ಕಾಲದ ಕಟ್ಟಡಗಳು ಹೇಗೆ ಬರೋಕೆ ಸಾಧ್ಯ. ಇದರಲ್ಲಿ ಏನಾದರೂ ಲಾಜಿಕ್ ಇದ್ಯಾ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.