‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಬಿಗ್ ಬಾಸ್ ಜರ್ನಿ ಜೊತೆಗೆ ಭವ್ಯಾ ಜೊತೆಗಿನ ಒಡನಾಟದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತ್ರಿವಿಕ್ರಮ್ (Trivikram) ಮಾತನಾಡಿದ್ದಾರೆ. ಭವ್ಯಾ ಮೇಲೆ ಲವ್ ಆಗಿತ್ತಾ? ಹೇಗೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:BBK 11: ನಾನು ಯಾವತ್ತಿದ್ದರೂ ಡಿಬಾಸ್ ಫ್ಯಾನ್: ‘ಬಿಗ್ ಬಾಸ್’ ರಜತ್
ತಮ್ಮ ಗರ್ಲ್‌ಫ್ರೆಂಡ್ ಡಾಕ್ಟರ್ ಎಂದು ವೈರಲ್ ಆಗಿದ್ದ ಸುದ್ದಿಗೆ ತ್ರಿವಿಕ್ರಮ್ ಮಾತನಾಡಿ, ನನ್ನ ಗರ್ಲ್‌ಫ್ರೆಂಡ್ ಡಾಕ್ಟರ್ ಆ ನನಗೂ ಗೊತ್ತಿಲ್ಲ ಎಂದು ಹೇಳಿ ವಿಚಾರವನ್ನು ಅವರು ಅಲ್ಲಗೆಳೆದಿದ್ದಾರೆ. ಈ ವಿಚಾರ ಸುಳ್ಳು ಎಂದಿದ್ದಾರೆ.
ಇನ್ನೂ ಭವ್ಯಾಗೆ ಅವರ ಪೋಷಕರು ಬರೆದ ಲೆಟರ್‌ನಲ್ಲಿ ಪನ್ನಿಕುಟ್ಟಿ ಅಂತ ಬರೆದಿತ್ತು. ಅದನ್ನೇ ನಾನು ಮುಂದುವರೆಸಿದೆ. ಆ ತರ ಲವ್ ಯೂ ಅಂತ ಆಚೆನೂ ಹೇಳಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ನಿಮ್ಮನ್ನು ಆಚೆ ತಳ್ಳುತ್ತಿದ್ದಾರೆ ಅಂದರೆ ಒಬ್ಬರು ಜೆನ್ಯೂನ್ ಫ್ರೆಂಡ್ ಬೇಕಾಗುತ್ತಾರೆ. ಹಾಗೆಯೇ ನನಗೆ ಭವ್ಯಾ ಫ್ರೆಂಡ್ ಅಷ್ಟೇ. ನನಗೆ ಅನುಷಾ, ಚೈತ್ರಾಕ್ಕ, ರಂಜಿತ್ ಎಲ್ಲರೂ ಕ್ಲೋಸ್ ಆಗಿದ್ದಾರೆ. ಅವರಂತೆಯೇ ಭವ್ಯಾ ಕೂಡ ಬೆಸ್ಟ್ ಫ್ರೆಂಡ್ ಎಂದಿದ್ದಾರೆ.
ಇನ್ನೂ ಭವ್ಯಾ ನನ್ನಗಿಂತ ಚಿಕ್ಕವಳು. ಅವಳೊಂದಿಗೆ ಮದುವೆ ಆಗಲ್ಲ ಎಂದು ಕೂಡ ತ್ರಿವಿಕ್ರಮ್ ತಿಳಿಸಿದ್ದಾರೆ.