‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ (Bigg Boss Kannada 11) ತ್ರಿವಿಕ್ರಮ್ ಹಾಗೂ ಭವ್ಯಾ (Bhavya Gowda) ನಡುವೆ ಉತ್ತಮ ಒಡನಾಟವಿದೆ. ಈ ಗೆಳೆತನ ಇತ್ತೀಚೆಗೆ ದೂರಾದಂತೆ ಕಂಡರೂ ಮತ್ತೆ ಇಬ್ಬರೂ ಒಂದಾಗುತ್ತಿದ್ದಾರೆ. ಇಷ್ಟು ದಿನ ಗೆಳತಿ ಭವ್ಯಾ ತಪ್ಪುಗಳನ್ನು ತ್ರಿವಿಕ್ರಮ್ (Trivikram) ಹೇಳುತ್ತಿರಲಿಲ್ಲ. ಈಗ ಅವರು ಓಪನ್ ಆಗಿ ತ್ರಿವಿಕ್ರಮ್ ತಪ್ಪುಗಳನ್ನು ಭವ್ಯಾಗೆ ಹೇಳುತ್ತಿದ್ದಾರೆ. ಭವ್ಯಾ ಮಾಡಿದ ತಪ್ಪುವೊಂದನ್ನು ಎತ್ತಿ ತೋರಿಸಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ ಟಾಸ್ಕ್ ಆಡುವಾಗ ಭವ್ಯಾ ಮೇಲೆ ಅಟ್ಯಾಕ್ ಮಾಡಲು ಸಹಸ್ಪರ್ಧಿಗಳು ಬಂದರು. ಆಗ ಅವರು ಹೊಟ್ಟೆ ನೋವಿದೆ ಎಂದು ರಾಗ ತೆಗೆದರು. ಇದಾದ ಮರುಕ್ಷಣವೇ ಗೌತಮಿ ಮೇಲೆ ಭವ್ಯಾ ಅಟ್ಯಾಕ್ ಮಾಡಲು ಮುಂದಾದರು. ಈಗ ಹೊಟ್ಟೆ ನೋವು ಎಲ್ಲೋಯ್ತು ಎಂದು ಗೌತಮಿ ಗುಡುಗಿದರು. ಆಗ ಭವ್ಯಾ ಅವರು ನಾಟಕ ಮಾಡುತ್ತಿದ್ದಾರೆ ಎಂದು ಮನೆ ಮಂದಿಗೆ ಅನಿಸಿದೆ. ಈ ವಿಚಾರವಾಗಿ ತ್ರಿವಿಕ್ರಮ್ ಹಾಗೂ ಭವ್ಯಾ ನಡುವೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ:ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ – ಡಿವೋರ್ಸ್ ವದಂತಿ ಬೆನ್ನಲ್ಲೇ ಮೌನ ಮುರಿದ ಧನಶ್ರೀ
ನನಗೆ ಆಟದಿಂದಾಗಿ ಫ್ರಸ್ಟ್ರೇಷನ್ ಆಯಿತು. ನಾನು ಏನು ಮಾಡುತ್ತಿದ್ದೇನೆ ಎಂಬುದು ನನ್ನ ಅರಿವಿಗೆ ಬರಲಿಲ್ಲ. ಡಾಕ್ಟರ್ ಬಳಿ ಹೋದಾಗ ಅವರು ಎಲ್ಲವೂ ಚೆನ್ನಾಗಿಯೇ ಇದೆ ಎಂದರು. ನನಗೇನು ಆಗಿಲ್ಲ ಎಂದು ಹೇಳಿ ನಾನು ಬಂದೆ ಎಂದು ಭವ್ಯಾ ಹೇಳಿಕೊಂಡರು. ನೀನು ಮಾಡಿದ್ದು ನಾಟಕ ಎಂದು ಎಲ್ಲರಿಗೂ ಅನಿಸಿತು ಎಂದು ತಪ್ಪನ್ನು ತಿದ್ದುವ ಕೆಲಸ ಮಾಡಿದರು ತ್ರಿವಿಕ್ರಮ್. ಹತಾಶೆಯಿಂದ ಈ ರೀತಿ ಆಯಿತು ಎಂದು ಭವ್ಯಾ ಮತ್ತೆ ತ್ರಿವಿಕ್ರಮ್‌ಗೆ ಸ್ಪಷ್ಟನೆ ಕೊಡುವ ಕೆಲಸ ಮಾಡಿದರು.
ಭವ್ಯಾ, ತ್ರಿವಿಕ್ರಮ್, ಚೈತ್ರಾ, ಮೋಕ್ಷಿತಾ, ಧನರಾಜ್ ಕೂಡ ನಾಮಿನೇಷನ್ ಲಿಸ್ಟ್‌ನಲ್ಲಿದ್ದಾರೆ. ವೀಕೆಂಡ್‌ನಲ್ಲಿ ಒಬ್ಬರು ದೊಡ್ಮನೆಯಿಂದ ಹೊರಹೋಗುವುದು ಖಚಿತ. ಎಲ್ಲದಕ್ಕೂ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.