ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್‌ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಸದಸ್ಯ ಎ.ವಿ.ರಾಜು (A.v Raju) ಅಸಂಬದ್ಧ ಹೇಳಿಕೆ ನೀಡಿದ್ದರು. ಈ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರಕ್ಕೆ ತ್ರಿಶಾ (Trisha Krishnan) ಕೂಡ ಪ್ರತಿಕ್ರಿಯಿಸಿ ತಕ್ಕ ಪಾಠ ಕಲಿಸೋದಾಗಿ ಹೇಳಿದ್ದರು. ಅದರಂತೆ ಎ.ವಿ ರಾಜು ನಡೆಗೆ ಇದೀಗ ತ್ರಿಶಾ ಕಾನೂನು ಸಮರ ಸಾರಿದ್ದಾರೆ.
Advertisement
ನಟಿ ತ್ರಿಶಾ ಅವರು ಎ.ವಿ ರಾಜು ಅವರ ಕುರಿತ ನೋಟಿಸ್ ಅನ್ನು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎ.ವಿ ರಾಜು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ರಾಜು ಕೊಟ್ಟಿರುವ ಹೇಳಿಕೆಗಳಿಂದ ನಟಿ ತ್ರಿಶಾ ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಮಾಧ್ಯಮಗಳಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ನೀಡದಂತೆ ಎಚ್ಚರಿಸಿದ್ದಾರೆ. ಇದನ್ನೂ ಓದಿ:‘ನಮ್ ಗಣಿ ಬಿ.ಕಾಂ ಪಾಸ್’ ಪಾರ್ಟ್ 2ಗೆ ಅಭಿಷೇಕ್ ಶೆಟ್ಟಿ ಸಿದ್ಧತೆ
Advertisement
Advertisement
ಈಗಾಗಲೇ ರಾಜು (A.v Raju) ಮಾಡಿರುವ ಹೇಳಿಕೆಗಳನ್ನು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳಿಂದ ಸಂಪೂರ್ಣ ಅಳಿಸಿ ಹಾಕಬೇಕು ಎಂದು ಹೇಳಿದ್ದಾರೆ. ಈ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ನಟಿ ತ್ರಿಶಾಗೆ ಎ.ವಿ ರಾಜು ಮತ್ತೆ ಕ್ಷಮೆಯಾಚಿಸಬೇಕು. ಇಲ್ಲದೆ ಹೋದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದು ತ್ರಿಶಾ ವಾರ್ನಿಂಗ್ ಕೊಟ್ಟಿದ್ದಾರೆ.
Advertisement
ನಿನ್ನೆಯಷ್ಟೇ (ಫೆ.21) ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜು ಕ್ಷಮೆ ಕೇಳಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ನಾನು ತ್ರಿಶಾ ರೀತಿಯ ನಟಿಯನ್ನು ಎಂದು ಹೇಳಿದ್ದು, ತ್ರಿಶಾ ಅವರನ್ನೇ ಅಂತ ಹೇಳಿಲ್ಲ. ಆದರೂ, ನಾನು ಕ್ಷಮೆ ಕೇಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲವೆಂದು ಹೇಳಿದ್ದರು. ಆದರೂ ಆಡಿದ ಮಾತಿಗೆ ರಾಜು ಬೆಲೆ ತೆರಬೇಕಾಗಿದೆ.
ಪದೇ ಪದೇ ನಟಿ ತ್ರಿಶಾ ಅವರ ಮೇಲೆ ಮಾನಹಾನಿ ಮಾಡುವಂತಹ ಘಟನೆಗಳು ತಮಿಳುನಾಡಿನಲ್ಲಿ ನಡೆಯುತ್ತಿವೆ. ಈ ಹಿಂದೆ ಮನ್ಸೂರ್ ಅಲಿ ಖಾನ್ ಕೂಡ ತ್ರಿಶಾರ ಬಗ್ಗೆ ಅವಹೇಳನ ಮಾಡುವಂತ ಮಾತುಗಳನ್ನು ಆಡಿದ್ದರು. ಇದೀಗ ತಮಿಳು ನಾಡಿನ ರಾಜಕೀಯ ಮುಖಂಡ ಎ.ವಿ.ರಾಜು ನಾಲಿಗೆ ಹರಿಬಿಟ್ಟಿದ್ದರು. ಲೈಂಗಿಕ ಕೆಲಸಕ್ಕಾಗಿ ಎ.ವೆಂಕಟಾಚಲಂ ಅವರು ತ್ರಿಶಾರಿಗೆ 25 ಲಕ್ಷ ರೂಪಾಯಿ ಆಫರ್ ನೀಡಿದ್ದರು. ಇಂತಹ ಅನೇಕ ನಟಿಯರು ನಮ್ಮಲ್ಲಿ ಇದ್ದಾರೆ ಎಂದು ರಾಜು ಹೇಳಿಕೆ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಗಾಗಿ ಕಾನೂನು ಕ್ರಮ ಮೂಲಕವೇ ನಟಿ ಉತ್ತರ ಕೊಟ್ಟಿದ್ದಾರೆ.