ಅಗರ್ತಲಾ: 60 ಸದಸ್ಯರ ಬಲ ಹೊಂದಿರುವ ತ್ರಿಪುರ (Tripura Vidhanasabha Election) ವಿಧಾನಸಭೆಗೆ ಇಂದು (ಗುರುವಾರ) ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆ 3,328 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಈ ಪೈಕಿ 1,100 ಸೂಕ್ಷ್ಮ ಮತ್ತು 28 ನಿರ್ಣಾಯಕ ಮತಗಟ್ಟೆಗಳಿದೆ.
Advertisement
ತ್ರಿಪುರದಲ್ಲಿ 28.13 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದು, ಒಟ್ಟು 259 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಮಾರ್ಚ್ 2ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ 55 ಸ್ಥಾನಗಳಲ್ಲಿ ಬಿಜೆಪಿ (BJP) ಸ್ಪರ್ಧಿಸಿದ್ದು ತನ್ನ ಮಿತ್ರ ಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ ಪಕ್ಷಕ್ಕೆ ಐದು ಸ್ಥಾನಗಳನ್ನು ಬಿಟ್ಟು ಕೊಟ್ಟಿದೆ. ಕಾಂಗ್ರೆಸ್ ಎಡ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು ಸಿಪಿಐ(ಐ) 47ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು ಕಾಂಗ್ರೆಸ್ 13 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
Advertisement
Advertisement
ತಿಪ್ರಾ ಮೋಥಾ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು, ತ್ರಿಪುರಾದ 60 ಕ್ಷೇತ್ರಗಳ ಪೈಕಿ 42 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಸುಮಾರು 20 ಬುಡಕಟ್ಟು ಪ್ರಾಬಲ್ಯದ ಸ್ಥಾನಗಳಲ್ಲಿ ಇದು ಪ್ರಾಬಲ್ಯ ಹೊಂದಿದೆ. ಟಿಎಂಸಿ (TMC) 28 ಸ್ಥಾನಗಳಲ್ಲಿ ಸ್ಪರ್ಧಿಸಿದ್ರೆ 58 ಮಂದಿ ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇರಲಿದ್ದು ಎಡ ಪಕ್ಷಗಳ ಕಾಂಗ್ರೆಸ್ ಮೈತ್ರಿ ಹೆಚ್ಚು ಸ್ಥಾನಗಳನ್ನು ಪಡೆಯಬಹುದು.
Advertisement
#WATCH | Tripura CM Dr Manik Saha casts vote in Assembly elections, in Agartala pic.twitter.com/fHpvoCpe4r
— ANI (@ANI) February 16, 2023
ಹೊಸ ಪಕ್ಷವಾದ ತಿಪ್ರಾ ಮೋಥಾ ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. 2018 ರಲ್ಲಿ ಚುನಾವಣೆಯಲ್ಲಿ ಬಿಜೆಪಿ 36 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿತ್ತು, ಅದರಲ್ಲಿ ಅರ್ಧದಷ್ಟು ಬುಡಕಟ್ಟು ಪ್ರದೇಶಗಳಿಂದ ಗೆದ್ದಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k