ಅಗರ್ತಲಾ: ನ್ಯಾಯಾಂಗ ನಿಂದನೆ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸ ನೀವು ಮಾಡಿ ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ.
ರಾಜ್ಯದ ನಾಗರಿಕ ಸೇವಾ ಅಧಿಕಾರಿಗಳ ಸಮ್ಮೇಳನಲ್ಲಿ ಮಾತನಾಡುತ್ತಾ ಅವರು, ಕೆಲಸ ಮಾಡದೆ ಹಲವರು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಸಬೂಬು ಹೇಳುತ್ತಾರೆ. ನ್ಯಾಯಾಂಗ ನಿಂದನೆಯಾದರೂ ಪರವಾಗಿಲ್ಲ, ನಾವು ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಆಗೋ ಹುಮ್ಮಸ್ಸಲ್ಲಿ ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತಾಡ್ತಿದ್ದಾರೆ: ಶಿವರಾಮ್ ಹೆಬ್ಬಾರ್
Advertisement
Advertisement
ಹಿಂದಿನ ಸರ್ಕಾರದಂತೆ ನಿವ್ಯಾರೂ ಕೆಲಸ ಮಾಡಬಾರದು. ನಮ್ಮ ಸರ್ಕಾರ ಹೇಳಿದಂತೆ ಕೆಲಸ ಮಾಡಬೇಕು. ಕೋರ್ಟ್‍ನಿಂದ ಸರ್ಕಾರ ನಡೆಯೋಲ್ಲ. ಯಾರೂ ನ್ಯಾಯಾಂಗ ನಿಂದನೆ ಹೆದರುವ ಅವಶ್ಯಕತೆ ಇಲ್ಲ. ರಾಜ್ಯದ ಒಳಿತಿಗಾಗಿ ಸದ್ಭಾವನೆಯಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್: 100ಕ್ಕೂ ಹೆಚ್ಚು ರೈತರ ಬಂಧನ, ಬಿಡುಗಡೆ
Advertisement
ಕೋರ್ಟ್‍ಗೆ ಯಾಕೆ ಹೆದರಬೇಕು? ಅದರ ಪಾಡಿಗೆ ಅದು ತೀರ್ಪು ನೀಡಲಿ. ಪೊಲೀಸರು ಕೋರ್ಟ್ ನೀಡಿದ ತೀರ್ಪು ಪಾಲನೆ ಮಾಡುತ್ತಾರೆ. ರಾಜ್ಯದ ಪೊಲೀಸರು ನನ್ನ ಕೆಳಗೆ ಇದ್ದಾರೆ ಎಂದು ಹೇಳಿದ್ದಾರೆ.
Advertisement
ನಾನು ಜನ ಆಯ್ಕೆ ಮಾಡಿದ ಸರ್ಕಾರದ ಮುಖ್ಯಸ್ಥ. ನಾನೇ ಇಲ್ಲಿ ಹುಲಿ, ಕೋರ್ಟ್‍ಗೆ ಹೆದರಬೇಡಿ. ಜನರಿಂದ ಆಯ್ಕೆಯಾದ ಸರ್ಕಾರ ಹೇಳಿದಂತೆ ಕೇಳಿ. ಕೋರ್ಟ್ ತೀರ್ಪು ಪಾಲನೆ ಮಾಡಬೇಕೇಂದೇನಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಚಿನ್ನ, ಬೆಳ್ಳಿ, ಹಣ ಬಿಟ್ಟು ಫ್ಲವರ್ ಪಾಟ್ ಕದ್ದೊಯ್ದ ಕಳ್ಳ
ಈಗ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ನೀಡಿರುವ ಈ ಹೇಳಿಕೆ ಕುರಿತಾದ ವೀಡಿಯೋ ಭಾರೀ ವೈರಲ್ ಆಗುತ್ತಿದೆ.