‘ಅನಿಮಲ್’ (Animal) ಸಿನಿಮಾದ ಸಕ್ಸಸ್ ಬಳಿಕ ಬಾಲಿವುಡ್ ನಟಿ ತೃಪ್ತಿ ದಿಮ್ರಿಗೆ (Tripti Dimri) ಬೇಡಿಕೆ ಜಾಸ್ತಿಯಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತೃಪ್ತಿ ಈಗ ಮುಂಬೈನಲ್ಲಿ ದುಬಾರಿ ಮನೆಯನ್ನು ಖರೀದಿಸಿದ್ದಾರೆ.
ಮುಂಬೈನ ಬಾಂದ್ರಾ ವೆಸ್ಟ್ ಪ್ರದೇಶದ ಕಾರ್ಟರ್ ರಸ್ತೆಯಲ್ಲಿ ತೃಪ್ತಿ ದಿಮ್ರಿ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ. ಈ ದುಬಾರಿ ಬಂಗಲೆಯ ಬೆಲೆ 14 ಕೋಟಿ ರೂ. ಮೌಲ್ಯದಾಗಿದೆ. ಇದನ್ನೂ ಓದಿ:ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ರಜನಿಕಾಂತ್
ಇದೀಗ ಮನೆಗೆ 70 ಲಕ್ಷ ರೂ. ಅಡ್ವಾನ್ಸ್ ಕೂಡ ಪಾವತಿಸಲಾಗಿದೆ. ಈ ಬಂಗಲೆಯನ್ನು ಒಟ್ಟು 2,226 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ತೃಪ್ತಿ ಈ ಬಂಗಲೆಯನ್ನು ಜೂನ್ 3ರಂದು ಖರೀದಿಸಿದ್ದಾರೆ. ಇದೀಗ ನೆಚ್ಚಿನ ನಟಿಯ ಸಕ್ಸಸ್ ನೋಡಿ ಅಭಿಮಾನಿಗಳು ಖುಷಿಪಡ್ತಿದ್ದಾರೆ.
ಇನ್ನೂ ಕರಣ್ ಜೋಹರ್ ನಿರ್ಮಾಣದ ಹೊಸ ಸಿನಿಮಾ, ಕಾರ್ತಿಕ್ ಆರ್ಯನ್ ಜೊತೆ ಹೊಸ ಚಿತ್ರ, ಅನಿಮಲ್ 2, ಪುಷ್ಪ 2ನಲ್ಲಿ ಐಟಂ ಡ್ಯಾನ್ಸ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ತೃಪ್ತಿ ಕೈಯಲ್ಲಿವೆ.