‘ಬ್ಯಾಡ್ ನ್ಯೂಸ್’ ಬಗ್ಗೆ ಖುಷಿ ಇದೆ ಅಂತಿದ್ದಾರೆ ತೃಪ್ತಿ ದಿಮ್ರಿ

Public TV
1 Min Read
tripti dimri 2

ನಿಮಲ್ ಚಿತ್ರ ಖ್ಯಾತಿಯ ತೃಪ್ತಿ ದಿಮ್ರಿ ಥಕಥಕ ಅಂತ ಕುಣೀತಾ ಇದ್ದಾರೆ. ಅನಿಮಲ್ ಹಿಟ್ ಆಗಿದ್ದೇ ತಡ, ಅವರನ್ನು ಅದೃಷ್ಟಗಳು ಹುಡುಕಿಕೊಂಡು ಬರುತ್ತಿವೆ. ಸದ್ಯ ಅವರು ಬ್ಯಾಡ್ ನ್ಯೂಸ್ ಅಲೆಯಲ್ಲಿ ತೇಲುತ್ತಿದ್ದು, ಈ ಚಿತ್ರ ಕೂಡ ತಮ್ಮ ವೃತ್ತಿ ಬದುಕಿಗೆ ದೊಡ್ಡ ಸಕ್ಸಸ್ ಕೊಡಲಿದೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಹೋದ ಕಡೆಗೆಲ್ಲ ಬ್ಯಾಡ್ ನ್ಯೂಸ್ ಬಗ್ಗೆ ಖುಷಿಯಿಂದಲೇ ಮಾತನಾಡುತ್ತಿದ್ದಾರೆ.

tripti dimri 3

ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ‘ಅನಿಮಲ್’ (Animal) ಸಿನಿಮಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ತೃಪ್ತಿ ದಿಮ್ರಿ (Tripti Dimri) ಈಗ ಇಬ್ಬರು ಸ್ಟಾರ್ ನಟರ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

tripti dimri

ರಣ್‌ಬೀರ್ ಕಪೂರ್ (Ranbir Kapoor) ಜೊತೆ ರೊಮ್ಯಾನ್ಸ್ ಮಾಡಿದ್ಮೇಲೆ ತೃಪ್ತಿ ಲಕ್ ಬದಲಾಗಿದೆ. ಬಾಲಿವುಡ್‌ನಲ್ಲಿ ನಟಿಗೆ ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡುತ್ತಿದ್ದಾರೆ. ಆಫರ್ ಮೇಲೆ ಆಫರ್ ತೃಪ್ತಿ ಕಡೆ ಅರಸಿ ಬರುತ್ತಿದೆ.

tripti dimri 1

ವಿಕ್ಕಿ ಕೌಶಲ್, ಆಮಿ ವಿರ್ಕ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾದಲ್ಲಿ ಇಬ್ಬರ ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಲಿದ್ದಾರೆ. ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ತೃಪ್ತಿ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಬ್ಬರ ನಟರ ಇಷ್ಟೋಂದು ಬೋಲ್ಡ್ ಆಗಿ ಕಾಣಿಕೊಳ್ತಾರಾ ಎಂದು ಪ್ರಶ್ನೆಗಳ ಸರಿಮಳೆಯನ್ನೇ ಹರಿಸಿದ್ದಾರೆ.

 

‘ಬ್ಯಾಡ್ ನ್ಯೂಸ್’ (Bad Newz) ಚಿತ್ರಕ್ಕೆ ಕರಣ್ ಜೋಹರ್ (Karan Johar) ನಿರ್ಮಾಣ ಮಾಡಿದ್ದಾರೆ. ವಿಕ್ಕಿ ಕೌಶಲ್, ಆಮಿಗೆ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದೆ. ಸಿನಿಮಾ ಇದೇ ಜುಲೈ 19ಕ್ಕೆ ರಿಲೀಸ್ ಆಗಲಿದೆ.

Share This Article