ಗುಂಪಿನಲ್ಲಿ ಪ್ರವಾಸ(Tour) ಹೋದಾಗ ಯಾರು ಎಷ್ಟು ಹಣವನ್ನು ನೀಡಿದ್ದಾರೆ? ಯಾವುದಕ್ಕೆ ಎಷ್ಟು ಖರ್ಚಾಗಿದೆ ಎನ್ನುವುದನ್ನು ಪುಸ್ತಕದಲ್ಲಿ ಲೆಕ್ಕ ಇಡುವ ಕಾಲ ಈಗಿಲ್ಲ. ಈಗ ಏನಿದ್ದರೂ ಎಲ್ಲ ಲೆಕ್ಕಾಚಾರ ಮೊಬೈಲಿನಲ್ಲೇ ಸಿಗಬೇಕು. ಇದಕ್ಕಾಗಿ ಬಹಳಷ್ಟು ಆ್ಯಪ್‌ಗಳು ಲಭ್ಯವಿದೆ. ಈ ಪೈಕಿ ಹೆಚ್ಚು ಮಂದಿ Splitwise ಆ್ಯಪ್ ಬಳಕೆ ಮಾಡುತ್ತಿದ್ದಾರೆ.
ಆ್ಯಪ್ ಇನ್ ಸ್ಟಾಲ್ ಆದ ಬಳಿಕ ಗ್ರೂಪ್ ರಚಿಸಿ ಸ್ನೇಹಿತರ ನಂಬರ್ ಸೇರಿಸಬೇಕು. ನಂತರ ಯಾವುದಕ್ಕೆ ಯಾರು ಹಣ ನೀಡಿದ್ದಾರೆ ಅದನ್ನು ಸೇರಿಸುತ್ತಾ ಹೋದರೆ ಆಯ್ತು. ಒಬ್ಬರು ಬೆಳಗ್ಗಿನ ಉಪಹಾರ, ಇನ್ನೊಬ್ಬರು ರಾತ್ರಿಯ ಭೋಜನ, ಪ್ರಯಾಣದ ಮಧ್ಯೆ ಚಹಾ, ಕುಡಿಯಲು ನೀರು…ಹೀಗೆ ಒಬ್ಬಬ್ಬರು ದುಡ್ಡು ಪಾವತಿ ಮಾಡುತ್ತಾ ಹೋಗುತ್ತಾರೆ. ಎಲ್ಲ ಪ್ರವಾಸ ಪೂರ್ಣಗೊಂಡ ನಂತರ Settle Up ಕೊಟ್ಟರೆ ಯಾರು ಯಾರಿಗೆ ಹಣ ನೀಡಬೇಕು? ಯಾರು ಎಷ್ಟು ಪಾವತಿ ಮಾಡಿದ್ದಾರೆ ಎಲ್ಲವೂ ಮೊಬೈಲ್ ಸ್ಕ್ರೀನ್‌ನಲ್ಲೇ ಕಾಣುತ್ತಿರುತ್ತದೆ. ನಂತರ ಬಾಕಿ ಉಳಿಸಿಕೊಂಡವರು ಬೇರೆಯವರಿಗೆ ಪಾವತಿ ಮಾಡಿದರೆ ಟೂರ್ ಪೂರ್ಣಗೊಂಡಂತೆ. ಇದನ್ನೂ ಓದಿ: ಅಲ್ಲಿ ನಿಂತರೆ ಕರ್ನಾಟಕ, ಇಲ್ಲಿ ನಿಂತರೆ ತಮಿಳುನಾಡು!
Advertisement
Advertisement
ಈ ಆ್ಯಪ್ ಪ್ರವಾಸ ಅಲ್ಲದೇ ಮನೆಯ ಲೆಕ್ಕಾಚಾರಕ್ಕೂ ಬಳಸಬಹುದು. Splitwise ಆ್ಯಪ್ ಪ್ರಚಾರ ಮಾಡುವುದು ಈ ಬರಹದ ಉದ್ದೇಶ ಅಲ್ಲ. ಯಾವುದಾದರೂ ಆಪ್ ಬಳಸಿ, ಲೆಕ್ಕಾಚಾರ ಪಾರದರ್ಶಕವಾಗಿರಲಿ. ಯಾಕೆಂದರೆ ಪ್ರವಾಸದ ಬಳಿಕ ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ಮಧ್ಯೆ ಗಲಾಟೆ ಆಗಬಾರದಲ್ಲ. ಇದನ್ನೂ ಓದಿ: ಅಂದು ಬ್ರಿಟಿಷರ ತರಕಾರಿ ತೋಟ, ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ಗಾರ್ಡನ್
Advertisement
ಬೈಕ್ ಟ್ರಿಪ್‌ನಲ್ಲಿ(Bike Trip) ಎರಡನೇ ಹೆಚ್ಚು ಬಳಕೆಯಾದ ಆಪ್ ಗೂಗಲ್ ಮ್ಯಾಪ್. ಮ್ಯಾಪ್‌ನಲ್ಲೂ(Google Map) ನಿಮಗೆ ಬೈಕ್, ಕಾರು, ಬಸ್ಸಿನಲ್ಲಿ ಹೋಗುತ್ತೀರಾ ಅಂತ ಕೇಳುತ್ತದೆ. ನೀವು ಬೈಕಿನಲ್ಲಿ ಹೋಗುತ್ತಿದ್ದಾಗ ಬೈಕ್ ಮೋಡ್ ಹಾಕಿ. ಯಾಕೆಂದರೆ ಹೈವೇ ಅಲ್ಲದೆ ಸ್ವಲ್ಪ ಮಣ್ಣಿನ ರಸ್ತೆಯಲ್ಲಿ ಹೋಗುವ ದಾರಿಯನ್ನು ತೋರಿಸುತ್ತದೆ. ಈ ದಾರಿಯಲ್ಲಿ ಹೋದರೆ ಕಡಿಮೆ ಅವಧಿಯಲ್ಲಿ ತಲುಪಬೇಕಾದ ಪ್ರದೇಶವನ್ನು ಬೇಗನೇ ತಲುಪಬಹುದು.
Advertisement
ಈ ರೀತಿ ಹೋಗುವುದಿದ್ದರೆ ಆಫ್ ಲೈನ್ ಗೂಗಲ್ ಮ್ಯಾಪ್ ಮೊದಲೇ ಡೌನ್ ಲೋಡ್ ಮಾಡಿಟ್ಟುಕೊಳ್ಳಬೇಕು. ಇಂಟರ್‌ನೆಟ್ ಸಿಗದ ಜಾಗದಲ್ಲಿ ಹೋದಾಗ ಆಫ್‌ಲೈನ್ ಮ್ಯಾಪ್ ತುಂಬಾ ಸಹಕಾರಿಯಾಗುತ್ತದೆ. ಇದರ ಜೊತೆ ಗಾಡಿಯಲ್ಲಿ ಪೆಟ್ರೋಲ್ ಇರಬೇಕು. ರಿಸರ್ವ್‌ನಲ್ಲಿ ಟ್ರೋಲ್ ಇದ್ದರೆ ಈ ಸಾಹಸ ಅಪಾಯಕಾರಿ. ಹೈವೇಯಲ್ಲಿ ಅಲ್ಲಲ್ಲಿ ಬಂಕ್ ಸಿಗುವಂತೆ ಗ್ರಾಮಗಳಲ್ಲಿ ಪೆಟ್ರೋಲ್ ಬಂಕ್ ಸಿಗುವುದಿಲ್ಲ. ಆಫ್ ರೋಡ್ ಅನುಭವ ಚೆನ್ನಾಗಿರುತ್ತದೆ. ಆದರೆ ಮಳೆಗಾಲದಲ್ಲಿ ಆಫ್ ರೋಡ್ ಪ್ರಯಾಣ ಕಷ್ಟವಾಗಬಹುದು.
– ಅಶ್ವಥ್ ಸಂಪಾಜೆ