ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (Trinamool Congress) ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ (Lok Sabha) ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಪುನರುಚ್ಚರಿಸಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ (INDIA Bloc) ನಿರಾಸೆ ಮೂಡಿದೆ.
ರಾಜ್ಯಸಭೆಯಲ್ಲಿ ತೃಣಮೂಲ ನಾಯಕ ಡೆರೆಕ್ ಒ’ಬ್ರೇನ್, ಕೆಲವು ವಾರಗಳ ಹಿಂದೆ, ಟಿಎಂಸಿ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳದ ಎಲ್ಲಾ 42 ಸ್ಥಾನಗಳಲ್ಲಿ ಟಿಎಂಸಿ ಸ್ಪರ್ಧಿಸುತ್ತಿದೆ ಎಂದು ಹೇಳಿದ್ದಾರೆ. ನಾವು ಕೂಡ ಒಂದು ಕ್ಷೇತ್ರದಲ್ಲಿ ಕಣದಲ್ಲಿದ್ದೇವೆ. ಅಸ್ಸಾಂನ ಕೆಲವು ಸ್ಥಾನಗಳು ಮತ್ತು ಮೇಘಾಲಯದ ತುರಾ ಲೋಕಸಭಾ ಸ್ಥಾನ. ಈ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರ ಸುರಕ್ಷಿತವಾಗಿದೆ, ನಾನು ಸ್ವತಂತ್ರಳಾಗಿದ್ದೇನೆ – ಬ್ರಿಟನ್ ಸಂಸತ್‌ನಲ್ಲಿ ಕಾಶ್ಮೀರದ ಪತ್ರಕರ್ತೆ ಶ್ಲಾಘನೆ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿರುವ ಮತ್ತು ದೆಹಲಿ, ಗುಜರಾತ್, ಗೋವಾದಲ್ಲಿ ಎಎಪಿ ಜೊತೆ ಒಪ್ಪಂದ ಮಾಡಿಕೊಂಡಿರುವ ಇಂಡಿಯಾ ಮೈತ್ರಿಕೂಟ ಹಾಗೂ ಕಾಂಗ್ರೆಸ್‌ಗೆ ಈ ಹೇಳಿಕೆಯಿಂದ ಹಿನ್ನಡೆಯಾಗಲಿದೆ.
ಪಶ್ಚಿಮ ಬಂಗಾಳದಲ್ಲಿನ ಒಪ್ಪಂದವು ವಿರೋಧ ಪಕ್ಷಕ್ಕೆ ಪ್ರಮುಖ ನೈತಿಕ ವರ್ಧಕವಾಗುತ್ತಿತ್ತು. ರಾಜ್ಯವು ಲೋಕಸಭೆಗೆ ಮೂರನೇ ಅತಿ ಹೆಚ್ಚು ಸಂಸದರನ್ನು ಕಳುಹಿಸುವ ಕಾರಣ ಚುನಾವಣಾ ದೃಷ್ಟಿಯಿಂದಲೂ ಮುಖ್ಯವಾಗಿದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಿಲ್‌ಗೆ ಪರಿಷತ್‌ನಲ್ಲಿ ಸೋಲು; ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ