ನವದೆಹಲಿ: ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ಬುಧವಾರದಂದು ದೆಹಲಿ ಹಾಗೂ ರಾಷ್ಟ್ರರಾಜಧಾನಿ ಪ್ರದೇಶದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ.
ಉತ್ತರಾಖಂಡ್‍ನ ಪೂರ್ವ ಡೆಹ್ರಾಡೂನ್ ನಿಂದ 121 ಕಿ.ಮೀ ದೂರದ ರುದ್ರಪ್ರಯಾಗದಲ್ಲಿ ಭೂಕಂಪದ ಕೇಂದ್ರ ಬಿಂದು ವರದಿಯಾಗಿದೆ. ಭಾರತೀಯ ಹವಾಮಾನ ಇಲಾಖೆ ತಿಳಿಸಿರುವಂತೆ ರಾತ್ರಿ 8:49 ರ ಸಮಯದಲ್ಲಿ 30 ಕಿ.ಮೀ ಭೂ ಆಳದಲ್ಲಿ ಭೂಕಂಪನ ಸಂಭವಿಸಿದೆ.
Advertisement
Just felt Earthquake tremors in Delhi. Hope everything is safe !
— Madhur Verma (@IPSMadhurVerma) December 6, 2017
Advertisement
ಕಳೆದ 24 ಗಂಟೆಯ ಅವಧಿಯಲ್ಲಿ ಉತ್ತರಾಖಂಡ್‍ನಲ್ಲಿ ಎರಡನೇ ಬಾರಿಗೆ ಭೂಕಂಪನವಾಗಿದೆ. ಮಂಗಳವಾರ 3.3 ತೀವ್ರತೆಯ ಭೂಕಂಪನ ಸಂಭವಿಸಿದ ಕುರಿತು ವರದಿಯಾಗಿತ್ತು. ಉತ್ತರಾಖಂಡ್‍ನ ರೂರ್ಕಿ, ಡೆಹ್ರಾಡೂನ್ ಜೊತೆಗೆ ಉತ್ತರ ಪ್ರದೇಶ ಹಾಗೂ ಹರಿಯಾಣದ ಕೆಲವು ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನದ ನಂತರ ಡೆಹ್ರಾಡೂನ್ ನಲ್ಲಿ ಹಲವು ಜನರು ತಮ್ಮ ಮನೆ ಹಾಗೂ ಕಟ್ಟಡಗಳಿಂದ ಹೊರಗೆ ಓಡಿಬಂದಿದ್ದಾರೆಂದು ವರದಿಯಾಗಿದೆ.
Advertisement
ಭೂ ಕಂಪನದಿಂದ ಹಾನಿಯಾಗಿರುವ ಕುರಿತು ಯಾವುದೇ ವರದಿ ಬಂದಿಲ್ಲ. ಭೂಕಂಪನ ಅನುಭವವಾದ ಕೆಲವೇ ಕ್ಷಣಗಳಲ್ಲಿ ಹಲವರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
Advertisement
Tremors In Delhi As 5.5 Magnitude Earthquake Hits Uttarakhand https://t.co/TILvs38T3x #NDTVNewsBeeps pic.twitter.com/Ys9NAUArBF
— NDTV (@ndtv) December 6, 2017