ಚಿಕ್ಕಬಳ್ಳಾಪುರ: ವೃಕ್ಷೋ ರಕ್ಷತಿ ರಕ್ಷಿತಃ ವೃಕ್ಷಗಳನ್ನ ದೇವರಂತೆ ಪೂಜೆ ಮಾಡೋದು ವಾಡಿಕೆ. ಆದರೆ ದೇವಾಲಯದ ಆವರಣದಲ್ಲಿದ್ದ ಕಲ್ಪವೃಕ್ಷಗಳನ್ನ ಅರ್ಚಕರೇ ಮುಂದೆ ನಿಂತು ಕಡಿಸಿ ಹಾಕಿದ್ದಾರೆ.
ಚಿಕ್ಕಬಳ್ಳಾಪುರದ ಪ್ರಸಿದ್ಧ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಗಿತ್ತು. ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ದೇಗುಲದ ಆದಾಯವು ಕಡಿಮೆಯಾಗಿತ್ತು. ಇದಕ್ಕೆಲ್ಲಾ ವಾಸ್ತುದೋಷವೇ ಕಾರಣವೆಂದು ನಂಬಿದ ಅರ್ಚಕ ಆಕಾಶ್ ದೇಗುಲದ ಆವರಣದಲ್ಲಿದ್ದ ಐದಾರು ತೆಂಗಿನ ಮರ, ಸಂಪಿಗೆ ಮರಗಳನ್ನು ಕಡಿದು ಹಾಕಿದ್ದಾರೆ.
ಮರ ಕಡಿಯುವ ವೇಳೆ ಕೊಂಬೆಗಳು ಬಿದ್ದು ದೇವಾಲಯದ ಗೋಪುರಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನರಸಿಂಹಮೂರ್ತಿ, ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಅರ್ಚಕ ಆಕಾಶ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.