ಮಂಡ್ಯ: ಪ್ರವಾಸಕ್ಕೆಂದು (School Trip) ಬಂದಿದ್ದ ಶಾಲಾ ವಿದ್ಯಾರ್ಥಿಗಳು (Students) ಹಾಗೂ ಶಿಕ್ಷಕರ (Teacher) ಮೇಲೆ ಮರ (Tree) ಬಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡಪುರ ತಾಲೂಕಿನ ಮೇಲುಕೋಟೆ (Melukote) ಯೋಗನರಸಿಂಹ ಸ್ವಾಮಿ ಬೆಟ್ಟದಲ್ಲಿ ನಡೆದಿದೆ.
ಧಾರ್ಮಿಕ ಪ್ರವಾಸ ಕೈಗೊಂಡಿದ್ದ ಮೈಸೂರು ಜಿಲ್ಲೆಯ ನಂಜನಗೂಡು ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಮೇಲುಕೋಟೆಯ ನರಸಿಂಹಸ್ವಾಮಿ ಬೆಟ್ಟ ಹತ್ತು ವೇಳೆ ಒಣಗಿದ್ದ ಮರವೊಂದು ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಈ ವೇಳೆ ಮರದ ಕೊಂಬೆಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಬಿದ್ದಿದೆ. ಇದರಿಂದ ಹಲವರಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಬ್ಲಾಕ್ ಮನಿಯನ್ನು ವೈಟ್ ಮಾಡಿತಾ ಚಿಲುಮೆ..?- ಡಿಕೆಶಿ ಹೊಸ ಬಾಂಬ್
Advertisement
Advertisement
ವಿದ್ಯಾರ್ಥಿಗಳಾದ ನಿಶಾಂತ್, ವರುಣ್, ಯೋಗೇಶ್ ಹಾಗೂ ಶಿಕ್ಷಕ ಕೇಶವರಾವ್‌ಗೆ ಘಟನೆಯಲ್ಲಿ ಗಂಭೀರ ಗಾಯಗಳಾಗಿವೆ. ಮೇಲುಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಇದ್ದರೂ ಕೂಡಾ ಸಿಬ್ಬಂದಿಯಿಲ್ಲದ ಕಾರಣ ಗಾಯಗೊಂಡ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಕರೆದೊಯ್ಯಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. 1 ಗಂಟೆಯ ಬಳಿಕ ಪಾಂಡವಪುರದಿಂದ ಬಂದ ಅಂಬುಲೆನ್ಸ್ನಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದನ್ನೂ ಓದಿ: ವೈಯಕ್ತಿಕ ಟೀಕೆ ಮಾಡುತ್ತಿದ್ರೆ ಚಪ್ಪಲಿಯಲ್ಲಿ ಹೊಡಿತೀನಿ – ಬಿಜೆಪಿ ಸಂಸದರಿಗೆ ಕವಿತಾ ವಾರ್ನ್