ಹಾಸನ: ಮೋದಿ ಸರ್ಕಾರದಲ್ಲಿ ಭೇಟಿ ಪಡಾವೋ, ಭೇಟಿ ಬಚಾವೋ ಎಂದು ಮಹಿಳೆಯ ಅಭಿವೃದ್ಧಿಗೆ ಪಣತೊಟ್ಟಿದೆ. ಆದರೆ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮಾತ್ರ ಮಹಿಳೆಯರು ಕೆಲಸಕ್ಕೆ ಬೇಡ ಎಂದು ಹೇಳಲಾಗುತ್ತಿದೆ.
ಹಾಸನ ಕೆಎಸ್‍ಆರ್ ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಮಹಿಳೆಯರಿಗೆ ಕೆಲಸ ಕೊಡೋದು ಬೇಡ ಪ್ಲೀಸ್ ಎಂದು ಎಡವಟ್ಟು ಪತ್ರವನ್ನು ಬರೆದಿದ್ದಾರೆ. ಕೆಎಸ್‍ಆರ್ ಟಿಸಿ ತಾಂತ್ರಿಕ ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಕೆಲಸಕ್ಕೆ ಮಹಿಳೆಯರ ನೇಮಕ ಬೇಡ, ಪುರುಷರಿಗಷ್ಟೇ ಅವಕಾಶ ನೀಡೋಣ ಅಂತಾ ಬೆಂಗಳೂರು ಕೆಎಸ್‍ಆರ್ ಟಿಸಿ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದಾರೆ.
Advertisement
Advertisement
ಮಹಿಳೆಯರಿಗೆ ಕೆಲ್ಸ ಕೊಡೋದು ಬೇಡ!
* ತಾಂತ್ರಿಕ ವಿಭಾಗದಲ್ಲಿ ಭದ್ರತೆಗಾಗಿ ಮಹಿಳೆಯರನ್ನು ನಿಯೋಜಿಸೋದಕ್ಕೆ ಕಷ್ಟವಾಗುತ್ತೆ.
* ಮಹಿಳೆಯರು ಸಿಕ್ಕಾಪಟ್ಟೆ ಸೂಕ್ಷ್ಮ ಮನಸ್ಥಿತಿಯವರು ರಜೆ ಜಾಸ್ತಿ ಹಾಕುತ್ತಾರೆ.
* ಪ್ರಸೂತಿ ರಜೆ, ಆರೋಗ್ಯ ಸರಿ ಇಲ್ಲ ಹೀಗೆ ನಾನಾ ಕಾರಣದಿಂದ ದೀರ್ಘ ರಜೆ ಹಾಕುತ್ತಾರೆ. ಪಾಪ ಆಗ ಪುರುಷ ಸಿಬ್ಬಂದಿಗಳ ಮೇಲೆ ಹೊರೆ ಬೀಳುತ್ತೆ.
* ಮಕ್ಕಳ ಲಾಲಾನೆ ಪಾಲನೆ ಅಂತಾ ಹೆಚ್ಚಿನ ರಜೆ ಕೇಳುತ್ತಾರೆ.
Advertisement
ಹೀಗೆ ನಾನಾ ಕಾರಣವನ್ನು ಅಧಿಕಾರಿ ಮುಂದಿಟ್ಟಿದ್ದಾರೆ. ಈಗಾಗಲೇ ತಾಂತ್ರಿಕ ವಿಭಾಗದಲ್ಲಿ ಇರುವ ಮಹಿಳೆಯರು ಕಾರ್ಯ ನಿರ್ವಹಿಸುತ್ತಿಲ್ಲ ಅಂತಾ ಅವಲತ್ತುಕೊಂಡಿದ್ದಾರೆ.
Advertisement