ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಸಾರಿಗೆ ಸಿಬ್ಬಂದಿ (Transport Staff) ಮತ್ತು ಸರ್ಕಾರದ ನಡುವಿನ ತಿಕ್ಕಾಟ ಮುಗಿಯುವ ಹಾಗೆ ಕಾಣುತ್ತಿಲ್ಲ. ಸರ್ಕಾರದ (Government) ವಿರುದ್ಧ ಮತ್ತೆ ಸಮರ ಸಾರಿರುವ ಸಾರಿಗೆ ನೌಕರರು ಸಾರಿಗೆ ಇಲಾಖೆ ಮುಂದೆ ಮಾಡು ಇಲ್ಲವೇ ಮಡಿ ಆಯ್ಕೆ ಇಟ್ಟಿದ್ದಾರೆ.
Advertisement
ಚುನಾವಣಾ (Election) ಹೊತ್ತಲ್ಲೇ ಮತ್ತೆ ಸಾರಿಗೆ ನೌಕರರು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಕಳೆದ ತಿಂಗಳಷ್ಟೇ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಸಾರಿಗೆ ನೌಕರರ ಒಕ್ಕೂಟ, ಈಗ ಮತ್ತೊಮ್ಮೆ ತಮ್ಮ ಬೇಡಿಕೆ ಈಡೇರಿಕೆಗೆ ಡೆಡ್ ಲೈನ್ (Deadline) ನೀಡಿದೆ. ಇದನ್ನೂ ಓದಿ: BBMP ವ್ಯಾಪ್ತಿಯಲ್ಲಿ ಅಧಿಕಾರಿಗಳ ಅಕ್ರಮ – 969 ಕೋಟಿ ರೂ. ಬೃಹತ್ ಅವ್ಯವಹಾರ ಬೆನ್ನತ್ತಿದ ED
Advertisement
Advertisement
ಫೆಬ್ರವರಿ ಅಂತ್ಯದೊಳಗೆ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದಿದ್ದರೆ ಮತ್ತೊಮ್ಮೆ ರಸ್ತೆಗೆ ಇಳಿದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಮುಂದೆ ನೌಕರರ ಒಕ್ಕೂಟ ಎರಡು ಆಯ್ಕೆಗಳನ್ನು ಮುಂದಿಟ್ಟಿದೆ. ಒಂದು ತಮ್ಮ ಬೇಡಿಕೆಗಳಿಗೆ ಒಪ್ಪಬೇಕು. ಎರಡನೇಯದು ಸರ್ಕಾರ ಬೇಡಿಕೆಗೆ ಒಪ್ಪದಿದ್ದರೆ ಪ್ರತಿಭಟನೆಯನ್ನು ಎದುರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಇದೇ ತಿಂಗಳು ಆರಂಭವಾಗುವ ವಿಧಾನಸಭಾ ಕಲಾಪದಲ್ಲಿ ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿ, ತೀರ್ಮಾನ ಪ್ರಕಟಿಸುವಂತೆ ಆಗ್ರಹ ಮಾಡಿದ್ದು, ಈ ತಿಂಗಳೇ ಸರ್ಕಾರಕ್ಕೆ ಡೆಡ್‌ಲೈನ್ ಅಂತಾ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Union Budget 2023ː ಕರ್ನಾಟಕಕ್ಕೆ ಬಂಪರ್ ಕೊಡುಗೆ – ರೈಲ್ವೆಗೆ ದಾಖಲೆಯ 7,561 ಕೋಟಿ ಅನುದಾನ
Advertisement
ಸದ್ಯ ಸಾರಿಗೆ ನೌಕರರ ಈ ಬಾರಿಯ ಪಟ್ಟು ಸರ್ಕಾರಕ್ಕೆ ಬಿಸಿ ತುಪ್ಪವಾಗಿಯೇ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ. ಕಾರಣ ಚುನಾವಣೆ ಸಂದರ್ಭದಲ್ಲಿ ಮತ್ತೊಮ್ಮೆ ಬಸ್ (Bus) ಸಂಚಾರ ಸ್ಥಗಿತಗೊಳಿಸಿ ಸಮರ ಸಾರಿದ್ರೆ ಸಾರ್ವಜನಿಕರಿಗೆ ಬಹಳ ತೊಂದರೆಯಾಗುವ ಸಾಧ್ಯತೆ ಇದ್ದು, ಚುನಾವಣೆ ಕೆಲಸಗಳಿಗೂ ತಡೆಯಾಗಬಹುದು. ಅಲ್ಲದೆ ಸರ್ಕಾರದ ಮೇಲೂ ಚುನಾವಣೆ ವೇಳೆ ಪರಿಣಾಮ ಬೀರಲಿದೆ. ಹಾಗಾಗಿ ಸದ್ಯ ಸರ್ಕಾರ ಕೂಡ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k