ಬೆಂಗಳೂರು: ಆ.5ರಂದು ಸಾರಿಗೆ ನೌಕರರ ಮುಷ್ಕರ (Transport Employees Strike) ನಡೆದರೆ ಸರ್ಕಾರದ ಬಳಿ ಪರ್ಯಾಯ ವ್ಯವಸ್ಥೆಯಿದ್ದು, 32 ಸಾವಿರ ಖಾಸಗಿ ವಾಹನಗಳ ಪೈಕಿ 40%ರಷ್ಟು ವಾಹನಗಳನ್ನ ಓಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು (Bengaluru) ನಗರದಲ್ಲಿ ಒಟ್ಟು 32,582 ಖಾಸಗಿ ವಾಹನಗಳಿವೆ. ಇದರಲ್ಲಿ ಖಾಸಗಿ ಬಸ್, ಟೆಂಪೋ ಟ್ರಾವಲ್ಸ್, ಮ್ಯಾಕ್ಸಿ ಕ್ಯಾಬ್‌ಗಳು ಸೇರಿವೆ. ಇದೀಗ 32 ಸಾವಿರ ಖಾಸಗಿ ವಾಹನಗಳ ಪೈಕಿ 40%ರಷ್ಟು ವಾಹನಗಳನ್ನ ಓಡಿಸಲು ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರತಿಭಟನಾ ರ‍್ಯಾಲಿ ಆ.8ಕ್ಕೆ ಮುಂದೂಡಿಕೆ: ಡಿಕೆಶಿ
ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ. ಸಿಎಂ ನೇತೃತ್ವದಲ್ಲಿ ಸಾರಿಗೆ ನೌಕರರ ಜೊತೆ ಸಭೆ ನಡೆಯುತ್ತಿದ್ದು, ಸಂಧಾನ ಸಭೆ ಯಶಸ್ವಿ ಆಗದಿದ್ದರೆ ಬಸ್ ಬಂದ್ ಗ್ಯಾರಂಟಿ. ಇದನ್ನೂ ಓದಿ: ಇಂದಿನಿಂದಲೇ ಸಾರಿಗೆ ನೌಕರರ ರಜೆ ರದ್ದು – ಸಾರಿಗೆ ಇಲಾಖೆ ಆದೇಶ
ಈ ಮುಷ್ಕರ ಆರಂಭವಾದರೆ ಸಹಜವಾಗಿಯೇ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಾರೆ. ಬಿಎಂಟಿಸಿಯಿಂದ (BMTC) 7 ಸಾವಿರ ಬಸ್‌ಗಳು, ಕೆಎಸ್‌ಆರ್‌ಟಿಯಿಂದ 8 ಸಾವಿರ ಬಸ್‌ಗಳು ಮುಷ್ಕರದಲ್ಲಿ ಭಾಗಿಯಾಗಲಿವೆ. 1.2 ಲಕ್ಷ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದು, ನಾಳೆ ಸಾರ್ವಜನಿಕರಿಗೆ ಬಸ್ ಸಮಸ್ಯೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರವು ಪರ್ಯಾಯ ವ್ಯವಸ್ಥೆಯಾಗಿ ಖಾಸಗಿ ವಾಹನಗಳನ್ನು ರಸ್ತೆಗಿಳಿಸಲು ಪ್ಲ್ಯಾನ್ ಮಾಡಿದೆ.